ಮಂಗಳೂರು: ಡ್ರಗ್ಸ್ ಮಾರಾಟ ಆರೋಪ; 8 ಮಂದಿ ವಿದ್ಯಾರ್ಥಿಗಳ ಬಂಧನ.

ಮಂಗಳೂರು: ನಗರದಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಎಂಟು ಮಂದಿ ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ಕೇರಳದ ರಾಹುಲ್, ಸಂಗೀತ್ ಕೃಷ್ಣ, ಸೂರಜ್, ಸಂಜಯ್, ಅಶ್ವಂತ್, ಅಬ್ದುಲ್ ಜಬ್ಬಾರ್ , ರಿಚರ್ಡ್, ಅನುರಾಗ್ ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಬಂದರ್ ದಕ್ಕೆಯಲ್ಲಿ ಎಂಡಿಎಂಎ ಮಾರಾಟದಲ್ಲಿ ನಿರತರಾಗಿದ್ದಾಗ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.

ನಗರದ ಕಾಲೇಜೊಂದರ ವಿದ್ಯಾರ್ಥಿಗಳಾಗಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಠಾಣೆಯ ಇನ್‌ಸ್ಪೆಪೆಕ್ಟರ್ ಗುರುರಾಜ್, ಎಸ್ಸೈಗಳಾದ ಮಾರುತಿ, ಶೀತಲ್ ಅಲಗೂರು, ರೇಖಾ ಮತ್ತಿರರರು ಪಾಲ್ಗೊಂಡಿದ್ದರು.