ಉಡುಪಿ: ಮಣಿಪಾಲದ ಓರೇನ್ ಇಂಟರ್ನ್ಯಾಷನಲ್ ನಲ್ಲಿ ಅಂತರಾಷ್ಟ್ರೀಯ ಯುವ ಕೌಶಲ್ಯ ದಿನವನ್ನು ಜು.15 ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲದ ಆಶ್ಲೇಷ್ ಹೊಟೇಲ್’ನ ಮಾಲಿಕರು ಹಾಗೂ ಮಣಿಪಾಲ ಮಹಿಳಾ ಸಮಾಜ ಅಧ್ಯಕ್ಷೆ ಶೃತಿ ಶೆಣೈ ಮಾತನಾಡಿ, ಕೌಶಲ್ಯಗಳೇ ಈ ಕಾಲಘಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ಜಾಸ್ತಿ ರೂಪಿಸಿಕೊಳ್ಳಬೇಕು. ಎಲ್ಲಾ ಕೌಶಲ್ಯ ತರಬೇತಿಗಳನ್ನು ಕಲಿಯುವುದು ಅತೀ ಮುಖ್ಯವಾಗಿದೆ. ಕೌಶಲ್ಯ ತರಬೇತಿಗಳನ್ನು ನೀವು ಯಾವಾಗ ಬೇಕಾದರೂ ಉಪಯೋಗಿಸಿಕೊಳ್ಳಬಹುದು ಎಂದರು.

ಎಂಎಸ್ ಡಿಸಿ ಮಣಿಪಾಲ ಇದರ ಅಧ್ಯಕ್ಷರು ಬ್ರಿ.ಡಾ. ಸುರ್ಜೀತ್ ಸಿಂಗ್ ಪಬ್ಲಾ ಮಾತನಾಡಿ, ಈಗಿನ ಕಾಲದಲ್ಲಿ ಪದವಿ ಕಲಿತರೆ ಸಾಲುವುದಿಲ್ಲ ಕೌಶಲ್ಯಗಳು ಬೇಕಾಗುತ್ತವೆ. ಪದವಿ ಇದ್ದು ಕೌಶಲ್ಯಗಳಿಲ್ಲದಿದ್ದರೆ ಯಾವ ಪದವಿಗೂ ಈಗ ಬೆಲೆಯೇ ಇಲ್ಲ. ಉದ್ಯೋಗ ಕ್ಷೇತ್ರದಲ್ಲಿ ಪದವಿಗಿಂತ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆವಿದೆ. ಎಂಎಸ್ ಡಿಸಿ ಈ ನಿಟ್ಟಿನಲ್ಲಿ ವೃತ್ತಿಪರ ಕೌಶಲ್ಯಗಳನ್ನು ಅಳವಡಿಸಲು ಹತ್ತಾರು ಕೋರ್ಸ್ ಗಳನ್ನು ರೂಪಿಸುತ್ತಿದೆ. ಕೌಶಲ್ಯಗಳಿಗೆ ಜಾಸ್ತಿ ಬೇಡಿಕೆ ಇರುವುದನ್ನು ಗಮನದಲ್ಲಿರಿಸಿ ನಾವು ಕೋರ್ಸ್ ಗಳ ಮೂಲಕ ಉದ್ಯೋಗ ಕ್ಷೇತ್ರದತ್ತ ಗುರಿ ಇರಿಸಿದ್ದೇವೆ ಎಂದರು.
ಓರೇನ್ ಇಂಟರ್ನ್ಯಾಷನಲ್ ಸೆಂಟರ್ ಮುಖ್ಯಸ್ಥರಾದ ನೀತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಕೌಶಲ್ಯ ಕೋರ್ಸ್ ಗಳು, ಮತ್ತು ಉದ್ಯೋಗ ಜಗತ್ತಿನ ಕುರಿತು ಮಾತನಾಡಿದರು.
ಎಂಎಸ್ ಡಿಸಿ ಅಡ್ಮಿಶನ್ ಆಫೀಸರ್ ಕಾಂತರಾಜ್ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯ ಪ್ರಮಾಣ ಪತ್ರ ವಿತರಿಸಲಾಯಿತು. ಅರ್ಪಿತಾ ಸ್ವಾಗತಿಸಿದರು. ಶೃತಿ ಹಾಗೂ ಅನುಷ ನಿರೂಪಿಸಿದರು.

























