ಉಡುಪಿ: ರಾಜದ್ರೋಹ ಎಸಗಿರುವ ಶಾಸಕ ಸುನೀಲ್ ಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ- ಶುಭದ ರಾವ್‌

ಉಡುಪಿ: ಪರಶುರಾಮ ಮೂರ್ತಿಯ ಹೆಸರಿನಲ್ಲಿ‌ ರಾಜದ್ರೋಹ ಎಸಗಿರುವ ಶಾಸಕ ಸುನೀಲ್ ಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲೋಹ ತಜ್ಞ ಅಲ್ಲಾ ಅಂತಾರೇ, ಆದ್ರೆ ಈ ಹಿಂದೆ ಕಂಚಿನ ಪ್ರತಿಮೆ ಅಂತಾ ಹೇಳಿಕೆ ಕೊಟ್ಟಾಗ, ವಾದ ಮಾಡೋವಾಗ ಲೋಹ ತಜ್ಞರಾಗಿದ್ರ…? ನಾವು ಫೈಬರ್ ಪ್ರತಿಮೆ ಅಂತಾ ಪೂವ್ ಮಾಡ್ತಿವಿ, ನೀವು ಕಂಚಿನ ಪ್ರತಿಮೆ ಅಂತಾ ಫೂವ್ ಮಾಡೋಕೆ ವಿಫಲರಾಗಿದ್ದೀರಾ, ಜನ ನಂಬಿಕೆ ಶ್ರದ್ಧೆ ಜೊತೆ ತಪ್ಪು ಮಾಡೋ ಕೆಲಸವನ್ನ ಶಾಸಕರು ಮಾಡಿದ್ದಾರೆ ಎಂದು ದೂರಿದರು.
ಶಾಸಕರ ತಪ್ಪಿಗೆ ಅಧಿಕಾರಿಗಳಿಗೆ ಶಿಕ್ಷೆ ಸಿಗುವಂತಾಗಿದೆ.ಈ ಕೂಡಲೇ ಶಾಸಕರು ತಕ್ಷಣ ರಾಜಿನಾಮೆ ನೀಡಬೇಕು. ನಮ್ಮ ಆರೋಪ, ನಿಮ್ಮ ವಾದಕ್ಕೆ ಶಾಸಕರಿಗೆ ಸವಾಲು ಅಂತಾ ಗುಡುಗಿದ್ದಾರೆ.