ಇಬ್ಬರ ಕಣ್ಣನ್ನು ಬೆಳಗಿಸಿದ  ಅಭಿನಯ ಸರಸ್ವತಿ : ತಮ್ಮ ಸಾವಿನಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾದ ಬಿ ಸರೋಜಾದೇವಿ

1960-70  ಸಮಯದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚಿದ ಬಹುಮುಖ ತಾರೆ  ಬಿ ಸರೋಜಾದೇವಿ ಅವರೀಗ ಲೋಕ ಬಿಟ್ಟು ಹೋದರೂ, ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಹೌದು 87 ವರ್ಷದ ಬಿ ಸರೋಜಾದೇವಿ ಚಿತ್ರರಂಗ ಕಂಡಂತಹ ಶ್ರೇಷ್ಠ ನಟಿಯಾಗಿದ್ದರು. ಇದೀಗ  ಈ ನಟಿಯ ಇಚ್ಛೆಯಂತೆ ಅವರ ಕುಟುಂಬಸ್ಥರು ಸರೋಜಾದೇವಿ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಬೆಳಕಾಗಿದ್ದಾರೆ.

ಈ ಸಂಬಂಧ ಐ ಬ್ಯಾಂಕ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಕೂಡಲೇ, ಐ ಬ್ಯಾಂಕ್‌ನ ತಂಡವು ಸರೋಜಾದೇವಿಯವರ ಮನೆಗೆ ಆಗಮಿಸಿತು. ಸರೋಜಾದೇವಿ ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ರು. ಬೆಂಗಳೂರಿನವರಾದ ಇವರು ಬೋಲ್ಡ್ ಡ್ರೆಸ್ ಗಳನ್ನು ತೊಡದೇ ಸಹಜ ಸುಂದರವಾಗಿ ಕಾಣಿಸಿಕೊಂಡು ಚಿತ್ರರಂಗದಲ್ಲಿ ಮೆರೆದಿದ್ದರು. ಯಾವುದೇ ಅತೀಯಾದ ಬೋಲ್ಡ್ ನೆಸ್ ಇಲ್ಲದೇ ನಟನೆ ಮಾಡುತ್ತಿದ್ದುದರಿಂದಲೇ  ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಒಂದು ಛಾಪನ್ನು ಮೂಡಿಸಿದ್ದರು. ಬರೀ ನಟನೆಯಲ್ಲಿ ಮಾತ್ರವಲ್ಲದೇ ಸಾವಿನ ಬಳಿಕವೂ ಇನ್ನೊಂದು ಜೀವಕ್ಕೆ ಬೆಳಕು ನೀಡಬೇಕು ಎನ್ನುವ ಅವರ ಆಸೆಯನ್ನು ನೇತ್ರದಾನ ಮಾಡುವ ಮೂಲಕ ಅವರ ಕುಟುಂಬಸ್ಥರು ಈಡೇರಿಸಿದ್ದಾರೆ.