ಉಡುಪಿ:’ಗುರು ಪೂರ್ಣಿಮೆ’ ಪ್ರಯುಕ್ತ ರಾಮ ಮಡಿವಾಳ ಹಾಗೂ ವಿಶ್ವನಾಥ ನಾಯಕ್ ಅವರಿಗೆ ಸನ್ಮಾನ.

ಉಡುಪಿ:ಇಂದು ಜುಲೈ 10, ಗುರುವಾರ ‘ಗುರು ಪೂರ್ಣಿಮೆ’ ಪ್ರಯುಕ್ತ ‘ಜ್ಞಾನದ ದೀವಿಗೆಯನ್ನು ನೀಡಿ ಬದುಕಿಗೆ ದಾರಿ ತೋರಿದ’ ಗುರುಗಳನ್ನು ಜಿಲ್ಲೆಯಾದ್ಯಂತ ಗೌರವಿಸುವ ಅಭಿಯಾನದ ಭಾಗವಾಗಿ ಹಿರೇಬೆಟ್ಟು ಗ್ರಾಮದಲ್ಲಿನ ಯಾವುದೇ ರೀತಿಯ ಧಾರ್ಮಿಕ, ದೈವ ದೇವರ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಶ್ರೀಯುತ ರಾಮ ಮಡಿವಾಳ ಹಾಗೂ ವಿಶ್ವನಾಥ ನಾಯಕ್ ನಿವೃತ ಮುಖ್ಯೋಪಾಧ್ಯಾಯರನ್ನ ಇಂದು ಗುರು ಪೂರ್ಣಿಮೆಯ ದಿನದಂದು ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾದ ಶ್ರೀನಿಧಿ ಹೆಗ್ಡೆ, ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶ್ರೀಕಾಂತ್ ಕಾಮತ್, ಮಾಜಿ ಹಿರೇಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುರುನಂದನ್ ನಾಯಕ್, ಬಿಜೆಪಿ ಪ್ರಮುಖರಾದ ಸುಂದರ್ ಮೂಲ್ಯ, ವೀರೇಂದ್ರ ಪೂಜಾರಿ ಹಾಗೂ ದೀಪಕ್ ಪೂಜಾರಿ ಉಪಸ್ಥಿತರಿದ್ದರು.