ನವದೆಹಲಿ: ಪ್ರತಿಷ್ಠಿತ ಐಫೋನ್ ತಯಾರಿಕಾ ಸಂಸ್ಥೆ Apple ನ ನೂತನ COO ಆಗಿ ಭಾರತ ಮೂಲದ ಸಾಬಿಹ್ ಖಾನ್ ನೇಮಕಗೊಂಡಿದ್ದಾರೆ. ಅಮೆರಿಕದ ಆ್ಯಪಲ್ ಕಂಪನಿಯು ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ (COO) ಭಾರತ ಮೂಲದ ಸಾಬಿಹ್ ಖಾನ್ (58) ಅವರನ್ನು ನೇಮಕ ಮಾಡಿದೆ. ಇವರು ಕಳೆದ 30 ವರ್ಷಗಳಿಂದ ಇದೇ ಸಂಸ್ಥೆಯಲ್ಲಿ ಕಾರ್ಯ ನಿರ್ಹಿಸುತ್ತಿದ್ದರು. ಸದ್ಯ ಕಾರ್ಯನಿರ್ವಹಣಾ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದರು . ಇನ್ನೇನು ನಿವೃತ್ತಿಯಾಗಲಿರುವ ಸಿಒಒ ಜೆಫ್ ವಿಲಿಯಮ್ಸ್ ಅವರ ಜಾಗಕ್ಕೆ ಸಾಬಿಹ್ ಖಾನ್ ನೇಮಕಗೊಳ್ಳುತ್ತಿದ್ದಾರೆ.












