ಉಡುಪಿ:ಕಾಂಗ್ರೆಸ್ ಸರಕಾರದ ವಿರುದ್ಧ ಹಾಗೂ ಗ್ಯಾರಂಟಿ ಯೋಜನೆಗೆ ವಿರೋಧ ಮಾಡುವ ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆಯನ್ನು ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಕಳತ್ತೂರಿನಲ್ಲಿರುವ ಕುತ್ಯಾರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ನಡೆಯಿತು.
ಸಂಧ್ಯಾ ಸುರಕ್ಷಾ, ವಿಧವಾ ವೇತನ ಮೊದಲಾದ ಸಾಮಾಜಿಕ ಪಿಂಚಣಿ ಗಳ ಮರು ಸಮೀಕ್ಷೆ ಕಾರ್ಯ ಸರಕಾರದ ಮಟ್ಟದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ನಡೆಯುತ್ತಿದೆ. ಆದರೆ ಬಿಜೆಪಿಗರು ಈ ಪಟ್ಟಿಯನ್ನು ಕೈಯಲ್ಲಿ ಹಿಡಿದು ಪಟ್ಟಿಯಲ್ಲಿರುವ ಪಿಂಚಣಿಗೆ ರದ್ದು ಆಗಲಿದೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಾರೆ. ಖಂಡಿತ ರದ್ದಾಗುವುದಿಲ್ಲ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಾ ಇದೆ. ಯಾರು ಭಯಪಡುವ ಅಗತ್ಯವಿಲ್ಲ ಎಂದು ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೈ ಸುಕುಮಾರ್ ಅಧ್ಯಕ್ಷತೆ ವಹಿಸಿದರು. ಕುತ್ಯಾರ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಶ್ ಕುಲಾಲ್, ಕಾಪು ಬ್ಲಾಕ್ ಕಾಂಗ್ರೆಸ್ ಕೋರ್ ಸಮಿತಿ ಸದಸ್ಯ ದಿವಾಕರ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಕೃಷ್ಣ ಕುಲಾಲ್, ಸ್ನಾನ್ಲಿ ಕೊಡ್ದ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಶರ್ಪುದ್ದೀನ್ ಶೇಕ್, ಕಾಂಗ್ರೆಸ್ ನಾಯಕರಾದ ರೋಹನ್ ಕುಮಾರ್ ಮಹಮ್ಮದ್ ಫಾರೂಕ್, ಜಾನ್ಸನ್ ಕರ್ಕಡ, ಅಲ್ವಿನ್ ಡಿಸೋಜ , ಕುತ್ಯಾರು ಅಲ್ಬರ್ಟ್ ಮೆoಡೋನ್ಸ, ಗಣೇಶ್ ನಾಯ್ಕ, ಶಶಿಕಾಂತ್ ಆಚಾರ್ಯ, ನಾರಾಯಣ ಮುಖಾರಿ, ಅಮೀರ್ ಕಾಪು, ಅಶೋಕ್ ನಾಯರಿ, ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಉಸ್ತುವಾರಿ ರತನ್ ಶೆಟ್ಟಿ ಶಿರ್ವ, ಭಾರತಿ ಶೆಟ್ಟಿಗಾರ್, ಗಣೇಶ್ ಶೆಟ್ಟಿ ಕುಕ್ಕುಂಜೆ ಮುಂತಾದ ಪಿಂಚಣಿ ಫಲಾನುಭವಿಗಳು ಉಪಸ್ಥಿತರಿದ್ದರು.












