ಹೆಬ್ರಿ:ಕೂಲಿ ಕಾರ್ಮಿಕ ನಾಪತ್ತೆ

ಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರಭಾಕರ ದೇವಾಡಿಗ (46) ಎಂಬ ವ್ಯಕ್ತಿಯು ಕೂಲಿ ಕೆಲಸ
ಮಾಡಿಕೊಂಡಿದ್ದು, ಮಧ್ಯಪಾನ ಮಾಡುವ ಚಟ ಹೊಂದಿರುತ್ತಾರೆ. ಈ ಹಿಂದೆ ಸುಮಾರು ಸಲ ಮನೆಯಿಂದ ಕೆಲಸಕ್ಕೆಂದು ಹೋದವರು 2-3 ತಿಂಗಳುಗಳ ಕಾಲ ಮನೆಗೆ ಬಂದಿರುವುದಿಲ್ಲ. ಆದರೆ 2023 ರ ಡಿಸೆಂಬರ್ ಮಾಹೆಯಲ್ಲಿ ಹೋದವರು ಈವರೆಗೂ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾರೆ.

5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು, ಹಿಂದಿ ಹಾಗೂ ಮರಾಠಿ ಭಾಷೆ
ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್ ಠಾಣೆ ದೂ.ಸಂಖ್ಯೆ: 08253-251116, ಪಿ.ಎಸ್.ಐ ಮೊ.ನಂ: 9480805463, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08258-231083 ಹಾಗೂ ಮೊ.ನಂ: 9480805435 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹೆಬ್ರಿ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.