ಮಣಿಪಾಲ: ಆ.10ರಂದು “ಕೆನರಾ ಫ್ರೀಡಂ ರನ್-2025′ ನಾಲ್ಕನೇ ಆವೃತ್ತಿ

ಉಡುಪಿ: ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಮಣಿಪಾಲ ಕೆನರಾ ಬ್ಯಾಂಕ್ ವೃತ್ತ ಕಚೇರಿ ಆಯೋಜಿಸಿಕೊಂಡು ಬರುತ್ತಿರುವ ‘ಕೆನರಾ ಫ್ರೀಡಂ ರನ್’ ನ ನಾಲ್ಕನೇ ಆವೃತ್ತಿ ಆಗಸ್ಟ್ 10ರಂದು ನಡೆಯಲಿದೆ ಎಂದು ಸಂಯೋಜಕರಾದ ಸಚಿನ್ ಶೆಟ್ಟಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ನಾಲ್ಕನೇ ಆವೃತ್ತಿಯನ್ನು ದೇಶದ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯು ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. 21ಕಿ.ಮೀ ಹಾಫ್ ಮ್ಯಾರಥಾನ್, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಓಟವನ್ನು ಆಯೋಜಿಸಲಾಗಿದೆ‌. ಬೆಳಿಗ್ಗೆ 5ಗಂಟೆಗೆ ಸ್ಪರ್ಧೆ ಆರಂಭಗೊಳ್ಳಿದ್ದು, ಬೆಳಿಗ್ಗೆ 8.30ಕ್ಕೆ ಸಮಾರೋಪ ನಡೆಯಲಿದೆ ಎಂದರು.

ಎಲ್ಲಾ ಸ್ಪರ್ಧೆಗಳು ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಿಂದ ಆರಂಭವಾಗಲಿವೆ. ಮ್ಯಾರಾಥಾನ್ ಮಣಿಪಾಲದಿಂದ ಟ್ಯಾಪ್ಮಿ, ಪರ್ಕಳ, ಆತ್ರಾಡಿ ಮಾರ್ಗವಾಗಿ ಸಾಗಿಬಂದು ಮಣಿಪಾಲ ಕಚೇರಿಗೆ ತಲುಪಲಿದೆ. ವಿಜೇತರಿಗೆ ಒಟ್ಟು 5 ಲಕ್ಷ ರೂ. ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು [email protected] ವೆಬ್ ಸೈಟ್ ಅಥವಾ ಕೆನರಾ ಬ್ಯಾಂಕ್ ನ ಎಲ್ಲ ಶಾಖೆಗಳಲ್ಲಿ ನೋಂದಣಿ ಮಾಡಬಹುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಯೋಜಕರಾದ ದುರ್ಗಾ ಪ್ರಸಾದ್, ವಿಶಾಲ್ ಸಿಂಗ್, ಸೂರಜ್ ಉಪ್ಪೂರ್, ರೋಹಿತ್ ಇದ್ದರು.