ಜುಲೈ 4, 5, ಮತ್ತು 6 ರಂದು ಹೆಬ್ರಿಯಲ್ಲಿ ಬೃಹತ್ “ಹಲಸು ಮತ್ತು ಹಣ್ಣು” ಮೇಳ

ಹೆಬ್ರಿ: ಟೀಮ್ ಕುಂದಾಪುರ ಪ್ರಸ್ತುತ ಪಡಿಸುವ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ) ಹೆಬ್ರಿ ಇವರ ಸಹಯೋಗದೊಂದಿಗೆ ಬೃಹತ್ ಹಲಸು ಮತ್ತು ಹಣ್ಣು ಮೇಳವು ಜುಲೈ 4, 5, ಮತ್ತು 6 ರಂದು ಹೆಬ್ರಿಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ.

ರಾಜ್ಯದ ವಿವಿಧ ಮೂಲೆಗಳಿಂದ ರುಚಿಯಾದ ಮಾವು ಹಾಗೂ ಹಲಸಿನ ಹಾಗೂ ಇದರ ಉತ್ಪನ್ನಗಳ ಹಾಗೂ ಶುಚಿ ರುಚಿಯಾದ ಹಣ್ಣಿನ ಖಾದ್ಯಗಳ ನೂರಾರು ಸ್ಟಾಲ್ ಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿದೆ. ಹಾಗೂ ವಿಶೇಷವಾಗಿ ಹಲಸಿನ ಜಿಲೇಬಿ ಮತ್ತು ಹಲಸಿನ ಹೋಳಿಗೆ ಇರಲಿದೆ.