ಮಹಾರಾಷ್ಟ್ರ: ಐ ಲವ್ ಯೂ ಎಂದು ಹೇಳುವುದು ಭಾವನೆ ಅಭಿವ್ಯಕ್ತಿ. ಈ ಮಾತಿನ ಹಿಂದೆ ಲೈಂಗಿಕ ಉದ್ದೇಶ ಇರುವುದಿಲ್ಲ ಎಂದು ಮುಂಬೈ ಹೈ ಕೋರ್ಟ್ ನ ನಾಗಪುರ ಪೀಠ ಹೇಳಿದೆ.
17 ವರ್ಷದ ಬಾಲಕಿಗೆ 35 ವರ್ಷದ ವ್ಯಕ್ತಿಯೊಬ್ಬ ಐ ಲವ್ ಯೂ ಎನ್ನುವ ಮೂಲಕ ಪ್ರೇಮ ನಿವೇದನೆ ಮಾಡಿದ್ದ ಇದರ ವಿರುದ್ಧ ಬಾಲಕಿ ದೂರು ನೀಡಿದ್ದಳು. ಆರೋಪಿಯ ಮೇಲೆ ಪೊಲೀಸರು ಫೋಕ್ಸೋ ಕೇಸ್ ದಾಖಲಿಸಿದ್ದರು.ಈ ಪ್ರಕರಣವಾಗಿ ಹತ್ತು ವರ್ಷಗಳಾದ ಮೇಲೆ ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಹೈ ಕೋರ್ಟ್ ನ್ಯಾಯಮೂರ್ತಿ ಊರ್ಮಿಳಾ ಜೋಶಿ ಫಾಲ್ಕೆ ಅವರು, ಪ್ರಕರಣದಲ್ಲಿ ಯಾವುದೇ ದುರುದ್ದೇಶ ಇದ್ದಂತೆ ಕಾಣುತ್ತಿಲ್ಲ ಹೆಂಗಸಿಗೆ ವ್ಯಕ್ತಿಯೊಬ್ಬ ಐ ಲವ್ ಯೂ ಎಂದಿದ್ದಾನೆಯೇ ಹೊರತು ಎಲ್ಲಿಯೂ ಹೆಂಗಸಿನ ಮೈ ಮುಟ್ಟಿಲ್ಲ. ಬಲವಂತವಾಗಿ ಆಕೆಯನ್ನು ಬಲತ್ಕರಿಸಿಲ್ಲ, ಅಶ್ಲೀಲ ಸನ್ನೆ, ಮುಟ್ಟುವುದು ಇತ್ಯಾದಿ ಮಾಡಿಲ್ಲ ಬದಲಾಗಿ ಮಾತಲ್ಲಿ ಐ ಲವ್ ಯೂ ಎಂದು ಮನದ ಭಾವನೆಯನ್ನು ಹಂಚಿಕೊಂಡಿದ್ದಾನೆ.ಹಾಗಾಗಿ ಇದು ಲೈಂಗಿಕ ಪ್ರಕರಣ ಆಗುವುದಿಲ್ಲ ಎಂದು ವಾದಿಸಿದ್ದಾರೆ. ಪೀಠವು ಆರೋಪಿಯನ್ನು ಖುಲಾಸೆಗೊಳಿಸಿ ಪ್ರಕರಣಕ್ಕೆ ಮಂಗಳ ಹಾಡಿದೆ.












