ಉಡುಪಿ: ಕರಾವಳಿ ಜಿಲ್ಲೆಗಳ ಸೌಹಾರ್ದ ವಾತಾವರಣ ಸೃಷ್ಟಿಗೆ ಕೆಪಿಸಿಸಿ ಉಡುಪಿಗೆ ನಿಯೋಗ ಕಳುಹಿಸಿದೆ. ಉಡುಪಿ ಕೃಷ್ಣ ಮಠ, ಜಾಮಿಯಾ ಮಸೀದಿ, ಮದರ್ ಆಫ್ ಸಾರೋಸ್ ಚರ್ಚ್ ಗೆ ಭೇಟಿ ಕೊಟ್ಟ ನಂತರ ವಿವಿಧ ಸಂಘ ಸಂಸ್ಥೆಗಳ ಸಭೆಯನ್ನು ನಡೆಸಿವೆ. ಮಾಧ್ಯಮಗಳ ಜೊತೆ ಮಾತನಾಡಿದ ನಿಯೋಗದ ಪ್ರಮುಖರು, ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಉಡುಪಿ ಜಿಲ್ಲೆಯ ಎರಡು ದಿನದ ಪ್ರವಾಸದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ಕೋಮು ಸೂಕ್ಷ್ಮ ಜಿಲ್ಲೆ, ಶಿಕ್ಷಣ ಮುಂದೆ ಇದೆ. Hate speeches ಗೆ ಯಾರೂ ಬೆಂಬಲ ಪ್ರಚಾರ ಕೊಡದಿದ್ದರೆ ಕರಾವಳಿ ಅಭಿವೃದ್ಧಿಗೆ ಸಹಾಯವಾಗುತ್ತದೆ. 2% ಜನ ವಾತಾವರಣ ಅಧ್ವಾನ ಮಾಡುವುದು, 90% ಜನ ಮೌನವಹಿಸೋದು ನಡೆಯುತ್ತಿದೆ. ಒಂದೇ ಪಕ್ಷದ ಗೆಲುವು ಜಿಲ್ಲೆಯ ಅಭಿವೃದ್ಧಿ ಗೆ ಅಪಾಯಕಾರಿ. ಕರಾವಳಿ ಜನರು, ಮತದಾರರು ಪರಿವರ್ತನೆ ಆಗಬೇಕು. ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಕಾಂಗ್ರೆಸ್ ಗೆ ಅವಕಾಶ ಮಾಡಬೇಕು ಎಂದರು.
ಬುದ್ಧಿವಂತರ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಯುತ್ತಿರುವುದು ಚಿಂತೆಯ ವಿಚಾರವಾಗಿದೆ. ಆರ್ಥಿಕ ಹೊಡೆತ, ಹೂಡಿಕೆಗೆ ಹಿನ್ನಡೆಯಾಗುತ್ತಿದೆ. . ಗಲಭೆಕೋರರಿಗೆ ಸೂಕ್ತ ಶಿಕ್ಷೆ, ಕಾನೂನು ಕ್ರಮ ಆಗಬೇಕು. ಕಾಂಗ್ರೆಸ್ ಸಂಘಟನೆ ಬಗ್ಗೆ 3 ದಶಕದ ಹಿಂದಿನ ದಿನ ನೆನಪು ಮಾಡಿಕೊಳ್ಳಬೇಕೆಂದರು. ಮರಳು, ಡ್ರಗ್ ಮಾಫಿಯಾ ಗಳ ಮೇಲೆ ನಿಗಾ. ಎಲ್ಲಾ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೇನ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್ ರಾಜ್ ಕಾಂಚನ್, ಎಂ.ಎ. ಗಫೂರ್, ರಾಜು ಪೂಜಾರಿ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೆರ, ಕೃಷ್ಣ ಶೆಟ್ಟಿ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.












