12 ಕ್ಕೂ ಹೆಚ್ಚು ನಟರ ಜೊತೆ ಅಫೇರ್, ಆದ್ರೆ ಈಗಲೂ ಸಿಂಗಲ್, ರೋಲ್ ಮಾಡೆಲ್: ಈ ಹಿರಿಯ ನಟಿ ಮತ್ತೆ ಸುದ್ದಿಯಾಗಿರೋದು ಯಾಕೆ ಗೊತ್ತಾ?

ಕೆಲವೊಂದು ವಿವಾದಗಳಲ್ಲಿ ವಿನಾಕಾರಣ ಸಿಕ್ಕಿ ಹಾಕಿಕೊಳ್ಳದೇ ಬಹಳಷ್ಟು ನಟರ ಜೊತೆ ವೈಯಕ್ತಿಕ ಅಫೇರ್ ಇದ್ದರೂ ಕೊನೆಗೂ ಏಕಾಂಗಿತನ ಅನುಭವಿಸುವ ಮತ್ತು ಯಾರ ಜೊತೆಗೂ ಸೆಟಲ್ ಆಗದೇ ಪ್ರೇಮಿವಿವಾದದ ಮೂಲಕ ಆಗಾಗ ಕಾಣಿಸಿಕೊಳ್ಳುವ ನಟಿಯರಿಗೇನೂ ಚಿತ್ರರಂಗದಲ್ಲಿ ಕೊರತೆಯಿಲ್ಲ ಕೊನೆಗೆ ಯಾರ ಜೊತೆಗೋ ವಿವಾಹವಾಗಿ ಕೊನೆಗೆ ವಿಚ್ಚೇದನ ಜಗಳದ ಮೂಲಕ ಸುದ್ದಿಯಾಗುವರೂ ಇದ್ದಾರೆ. ಆದರೆ ವಿವಾಹವಾಗದೇ ಅಂದುಕೊಂಡಂತೆ ಬದುಕುತ್ತಿರುವ ಹಿರಿಯ ನಟಿಯೊಬ್ಬರು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಇಂತಹ ಸುಂದರ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್ ನ ಸುರ ಸುಂದರಿ ಸುಶ್ಮಿತಾಸೇನ್. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರದ ಮೂಲಕ ಎಂಟ್ರಿ ಕೊಟ್ಟು ಕೊನೆಗೆ 1996 ರಲ್ಲಿ ‘ದಸ್ತಕ್’ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಚೆಲುವೆ ಸುಶ್ಮಿತಾ ಈಗಲೂ ಸೌಂದರ್ಯ ಉಳಿಸಿಕೊಂಡು ಬಾಲಿವುಡ್ ನಲ್ಲಿ ಅಪರೂಪಕ್ಕೆ ನಟಿಸುತ್ತಿದ್ದಾರೆ.

ಈ ನಟಿಗೀಗ 50 ವರ್ಷ ತುಂಬಿದೆ. ಈಕೆ ಬೇರೆ ಬೇರೆ  ಸ್ಟಾರ್ ನಟರ ಜೊತೆ ಅಫೇರ್ ಇಟ್ಟುಕೊಂಡಿರುವುದು ಆಗಾಗ ಸುದ್ದಿಯಾಗುತ್ತಿತ್ತು 12 ಕ್ಕೂ ಹೆಚ್ಚು ನಟರ ಜೊತೆ ಈಕೆಗೆ ಅಫೇರ್ ಇತ್ತು ಉದ್ಯಮಿ ಲಲಿತ್ ಮೋದಿ ಜೊತೆಗೂ ಒಮ್ಮೆ ಈಕೆ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಆದರೆ  ಸುಶ್ಮಿತಾ ಸೇನ್ ಸ್ವತಂತ್ರವಾಗಿ ಯೋಚಿಸುವ ನಟಿ. ಆದಕ್ಕೆ ಆಕೆ ಈವರೆಗೂ ಮದ್ವೆಯಾಗಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದ್ವೆಯಾಗದೇ ಹೀಗೆ ಇರುವುದೇ ನಂಗೆ ಖುಷಿಕೊಡುತ್ತದೆ ಎನ್ನುವುದನ್ನು ಹೇಳಿ ಚಿತ್ರರಂಗದಲ್ಲಿ ಅಚ್ಚರಿಗೆ ಕಾರಣವಾಗಿದ್ದರು ಸುಶ್ಮಿತಾ. ಮದ್ವೆಯಾಗದೇ ಹೀಗೆ ಅಫೇರ್ ಇಟ್ಟುಕೊಂಡು ಬದುಕುವುದೇ ಈಕೆಗೆ ಖುಷಿ ಕೊಡಬಹುದೇನೋ ಎಂದು ಒಂದಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈಕೆಯ ಕುರಿತು ವ್ಯಂಗವಾಡಿದ್ದರು.

ಆದರೆ ವಿಶೇಷವೆಂದರೆ ಈಕೆ ಮದುವೆಯಾಗುವ ಬದಲು ಡೇಟಿಂಗ್‌ನಲ್ಲಿ ಸಮಯ ಕಳೆಯುತ್ತಿರುವುದು ಮಾತ್ರವಲ್ಲ. ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸುತ್ತಿರುವುದು ಮಾತ್ರ ಸಣ್ಣ ವಿಷಯವಲ್ಲ. ಇದೀಗ ಚಿತ್ರರಂಗದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಸುಷ್ಮಿತಾ  ಅಭಿಮಾನಿಗಳಿಗೆ ತುಂಬಾ ಹತ್ತಿರಾಗಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟು ಸದಾ ವಿಚ್ಚೇದನ ಜಗಳಗಳಿಂದಲೇ ಸುದ್ದಿಯಾಗುವ ನಟ ನಟಿಯರ ಮಧ್ಯೆ ಸುಶ್ಮಿತಾ ವಿಭಿನ್ನವಾಗಿ ಗುರುತಿಸುತ್ತ ಖುಷಿಯಿಂದ ಬದುಕುತ್ತಿರುವುದು ಈ ಹಿರಿಯ ನಟಿಯ ಅಭಿಮಾನಿಗಳಿಗೆ ಖುಷಿ ತಂದಿದೆ.