ಉಡುಪಿ:”ಯುವ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸುವಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮಾದರಿ ಸಂಸದೀಯ ಕಾರ್ಯ ನಡವಳಿಕೆಯನ್ನು ಪ್ರಾಯೇೂಗಿಕವಾಗಿ ನಡೆಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದು ಇಂದಿನ ಅಗತ್ಯತೆಯೂ ಹೌದು.
ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಗುಣ ಬೆಳೆಸುವುದು ಶಿಕ್ಷಣದ ಮೂಲ ಉದ್ದೇಶ.ನಾಯಕತ್ವ ಪ್ರಮುಖ ಗುಣಗಳಾದ ನಮ್ರತೆ, ಸ್ವಷ್ಟತೆ, ಧೈರ್ಯ, ನಿರ್ಧಾರ ಮುಂತಾದ ಸಾಮರ್ಥ್ಯವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಮೈಗೂಡಿಸಿಕೊಳ್ಳ ಬೇಕು”ಎಂದು ರಾಜಕೀಯ ವಿಶ್ಲೇಷಕ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಎಂಜಿಎಂ.ಕಾಲೇಜು ಉಡುಪಿ ಇವರು ಅಭಿಪ್ರಾಯಿಸಿದರು.

ಕೇೂಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ ಮಾತನಾಡಿದರು. ಸಭಾ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯಸ್ಥೆ ಪ್ರೀತಿ ರೇಖಾ ವಹಿಸಿ ಪ್ರತಿಜ್ಞಾ ವಿಧಿ ಬೇೂಧಿಸಿದರು.ಶಾಲಾ ಸಂಸತ್ತು ಸದನದ ಸಭಾಪತಿ ಕು.ಸಮೃದ್ಧಿ;ಉಪ ಸಭಾಪತಿ ಕು.ಪ್ರಗತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿನಾಯಕ ಅಭಿಷೇಕ ಸ್ವಾಗತಿಸಿದರು.












