ಬ್ರಹ್ಮಾವರ:ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆ:ಉದ್ಯೋಗ ಮೇಳ ಕಾರ್ಯಕ್ರಮ

ಉಡುಪಿ: ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಉದ್ಯೋಗ ಮೇಳವನ್ನು ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯರವರು ಆಯೋಜಿಸಿದ್ದರು.

ಈ ಉದ್ಯೋಗ ಮೇಳದಲ್ಲಿ 20ಕ್ಕೂ ಖಾಸಗಿ ಮತ್ತು ಬಹಿರಂಗ ಸಂಸ್ಥೆಗಳು ಭಾಗವಹಿಸಿದ್ದು, ಕಾಲೇಜಿನ ಸಂಚಾಲಕಿಯಾದ ಶ್ರೀಮತಿ ಮಮತಾ ಪ್ರಾಂಶುಪಾಲರಾದ ಡಾ.ಸೀಮಾ ಜಿ ಭಟ್ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸ್ವಾತಿಯವರು ಸ್ವಾಗತವನ್ನು ಕುಮಾರಿ ಸೋಫಿಯಾ ರವರು ಮತ್ತು ವಂದನೆಯನ್ನು ಕುಮಾರಿ ಸಾಕ್ಷಿತಾರವರು ನೆರವೇರಿಸಿದರು.

ಈ ಉದ್ಯೋಗ ಮೇಳದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ, ಉಡುಪಿ, ಕುಂದಾಪುರ, ಶಿವಮೊಗ್ಗ ಮುಂತಾದ ಪ್ರದೇಶದ ಸರಕಾರಿ ಮತ್ತು ಖಾಸಗಿ ಕಾಲೇಜಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಸುಮಾರು 200ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಪ್ರಸ್ತಾಪ ಪತ್ರವನ್ನು ಪಡೆದಿರುತ್ತಾರೆ.