ಉಡುಪಿ: ಇನ್ಸಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆಟ್ಸ್‌ನ ಮಲ್ಪೆ ಶಾಖೆಯ ವತಿಯಿಂದ ಬುಡೋಕಾನ್ ಕರಾಟೆ ಇಂಟರ್ನ್ಯಾಷನಲ್ ಇದರ ಅಧ್ಯಕ್ಷ ಹಾಗೂ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆಟ್ಸ್‌ನ ಸಂಸ್ಥಾಪಕ ಪ್ರವೀಣ್ ಕುಮಾರ್ ಅವರ ನೆನಪಿಗಾಗಿ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯು ಸೆಪ್ಟೆಂಬರ್ 6 ಮತ್ತು 7ರಂದು ಉಡುಪಿ ಅಂಬಾಗಿಲಿನ ಅಮೃತ ಗಾರ್ಡ್ ನ್ ಸಭಾಭವನದಲ್ಲಿ ನಡೆಯಲಿದೆ ಎಂದು ತರಬೇತುದಾರ ಎಂ. ಸುರೇಶ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಸ್ಪರ್ಧಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 2 ಸಾವಿರಕ್ಕಿಂತಲೂ ಅಧಿಕ ಕರಾಟೆ ಪಟುಗಳು, 200ಕ್ಕೂ ಅಧಿಕ ತೀರ್ಪುಗಾರರು ಭಾಗವಹಿಸಲಿದ್ದಾರೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಕಟಾ ಮತ್ತು ವೈಯಕ್ತಿಕ ಕುಮಟೆ ಸ್ಪರ್ಧೆಗಳು ನಡೆಯಲಿದೆ. ವಿಶೇಷ ಆಕರ್ಷಣೆಯಾದ ಕುಮಟೆ ಗ್ಯಾಂಡ್ ಚಾಂಪಿಯನ್ ಶಿಪ್ ಸ್ಪರ್ಧೆಯು ನಡೆಯಲಿದೆ ಎಂದರು.
ಕರಾಟೆ ತರಬೇತುದಾರರಾದ ಆನಂದ್ ದೇವಾಡಿಗ, ಪ್ರಭಾಕರ್ ಕುಂದರ್, ವಿನೋದ್ ಉಳ್ಳಾಲ್, ಬಾಲಕೃಷ್ಣ ಆಳ್ವಾ, ಸಂಘಟನಾ ಸಮಿತಿ ಅಧ್ಯಕ್ಷ ಸಚಿನ್ ಕರ್ಕಡ, ಉಪಾಧ್ಯಕ್ಷ ಸಂದಿಪ್ ಖಾರ್ವಿ, ಸಂಘಟಕ ಕಿರಣ್ ಮಾರ್ಷಲ್, ಮಾಧ್ಯಮ ಸಲಹೆಗಾರ ಸುಬೋದ್ ಕುಮಾರ್ ಉಪಸ್ಥಿತರಿದ್ದರು.












