ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದು ದೀಪಿಕಾ ಅಭಿಮಾನಿಗಳು ಸಖತ್ ಥ್ರಿಲ್ಲ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ತಮ್ಮ ಜೀವನದಲ್ಲಾದ ಘಟನೆಯೊಂದರ ಕುರಿತು ಓಪನ್ ತಾಕ್ ಕೊಟ್ಟಿದ್ದಾರೆ
ದೀಪಿಕಾ ಪಡುಕೋಣೆ ಮಾಡೆಲಿಂಗ್ ಮತ್ತು ಜಾಹೀರಾತು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ದೀಪಿಕಾ ಒಳಉಡುಪು ಉತ್ಪನ್ನದ ಕುರಿತು ಒಂದು ಜಾಹೀರಾತಿನ ಫೋಟೋ ಶೂಟ್ ಗಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಾಗ ಅಲ್ಲಿದ್ದ ಜಾಹೀರಾತು ನಿರ್ದೇಶಕರು, ಲೈಂಗಿಕವಾಗಿ ಕಮೆಂಟ್ ಮಾಡಿದ್ದು ದೀಪಿಕಾಗೆ ತೀರಾ ಮುಜುಗರಕ್ಕೆ ಕಾರಣವಾಯಿತಂತೆ, ಆ ವೇಳೆಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ದೀಪಿಕಾಳ ವಿವಿಧ ಭಮಘಿಯ ವಿಡಿಯೋಗಳನ್ನು ತೆಗೆದ ಜಾಹೀರಾತು ನಿರ್ದೇಶಕರು ಕೊನೆಗೆ ನಿಮ್ಮ ಭಂಗೀ ಯಾಕೋ ಸರಿ ಬರುತ್ತಿಲ್ಲ ಎಂದು ಕೊನೆಗೆ,

“ನಿಮ್ಮ ಸ್ತನಗಳು ತುಂಬಾ ಚಿಕ್ಕದಾಗಿವೆ, ನಮ್ಮ ಜಾಹೀರಾತಿಗೆ ದೊಡ್ಡ ಸ್ತನಗಳು ಬೇಕು!” ನಿಮಗೆ ಆ ಸ್ತನವಿಲ್ಲ ಎಂದರಂತೆ. ಜಾಹೀರಾತು ನಿರ್ದೇಶಕರು ಈ ರೀತಿ ಹೇಳಿದಾಗ ದೀಪಿಕಾ ಶಾಕ್ ಆದರಂತೆ. ಮುಂದುವರೆದು ನೀವು ಯೋಚಿಸಬೇಡಿ, ಎಡಿಟಿಂಗ್ ಮಾಡುವಾಗ ನಾನು ನಿಮ್ಮ ಸ್ತನಗಳನ್ನು ದೊಡ್ಡ ಮಾಡುತ್ತೇನೆ ಆ ಆಕರ್ಷಕವಾಗಿ ಕಾಣ್ತೀರಿ” ಎಂದು ಕೆಟ್ಟದ್ದಾಗಿ ಮಾತಾಡಿದರಂತೆ. ಅಲ್ಲದೇ ಆ ನಿರ್ದೇಶಕ ನೀವು ಆಪರೇಷನ್ ಮೂಲಕ ನಿಮ್ಮ ಎದೆಯ ಗಾತ್ರ ವೃದ್ದಿಸಿಕೊಳ್ಳಿ ಎಂದೂ ಸಲಹೆ ನೀಡಿದನಂತೆ ಆ ನನಗೆ ಮುಜಗರವಾಯ್ತು, ಬಳಿಕ ಏನೊಂದೂ ಪ್ರತಿಕ್ರಿಯಿಸದೇ ತಾನು ಶೂಟಿಂಗ್ ಸೆಟ್ ನಿಂದ ಬೇಸರದಿಂದ ಹೊರನಡೆದೆ ಇನ್ಯಾತ್ತೂ ಜಾಹೀರಾತು ಮಾಡುವುದಿಲ್ಲ ಎಂದು ನಿರ್ದೇಶಕರಿಗೆ ಬಳಿಕ ಸಂದೇಶಿಸಿದೆ ಎಂದು ಸಂದರ್ಶನವೊಂದರಲ್ಲಿ ತಮ್ಮ ಮನಸ್ಸಿನ ಮಾತುಗಳನ್ನು ಬಿಚ್ಚಿಕೊಂಡಿದ್ದಾರೆ ನಟಿ ದೀಪಿಕಾ ಪಡುಕೋಣೆ.












