ಸಿಮ್, ವಯರ್ ಯಾವುದೂ ಇಲ್ಲದೇ 100 mbps speed ನಲ್ಲಿ ಕಾರ್ಯನಿರ್ವಹಿಸುವ ಒಂದು ಅದ್ಬುತ ಇಂಟರ್ ನೆಟ್ ಅನ್ನು ಬಿಎಸ್ಎನ್ಎಲ್ ಶುರು ಮಾಡಿದ್ದು ಈ ಸೇವೆಗೆ ಕ್ವಾಂಟಮ್ 5G ಎಂದು ಹೆಸರಿಡಲಾಗಿದೆ. ಈಗಾಗಲೇ ಭಾರತದ ಆಯ್ದ ಕೆಲವು ನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದ್ದು ಇದೀಗ ಮೊದಲಾಗಿ ಹೈದರಾಬಾದ್ ನಲ್ಲಿ ಈ ಸೇವೆಗೆ ಬಿಎಸ್ಎನ್ಎಲ್ ಚಾಲನೆ ನೀಡಿದೆ. ವಿಡಿಯೋ ಕರೆಯಿಂದ ಹಿಡಿದು ಇಂಟರ್ನೆಟ್ ಆಧಾರಿತ ಯಾವುದೇ ಕೆಲಸನ್ನು ಕೆಲೇ ಸೆಕೆಂಡ್ ಗಳಲ್ಲಿ ಮಾಡಿಬಿಡುವ ವೇಗಧೂತ ನೆಟ್ ಇದು.
ಬಿಎಸ್ಎನ್ಎಲ್ ಕ್ವಾಂಟಮ್ 5G ಬಗ್ಗೆ ಭಾರತೀಯರ ನಿರೀಕ್ಷೆ ಇದೀಗ ಜಾಸ್ತಿಯಾಗಿದ್ದು ಕೆಲವೇ ಸಮಯದಲ್ಲಿ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯದಲ್ಲೂ ಈ ಸೇವೆ ಎಲ್ಲರಿಗೂ ಸಿಗಲಿದೆ. ಮನೆ ಬಳಕೆಗೆ ಮತ್ತು ಕಛೇರಿ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಈ ಸೇವೆಯನ್ನು ಸಿದ್ದಪಡಿಸಲಾಗಿದೆ. ಈಗಾಗಲೇ ದೇಶದಾದ್ಯಂತ ಸುಮಾರು ಒಂದು ಲಕ್ಷ 5 ಜಿ ಟವರ್ ಗಳನ್ನು ನಿರ್ಮಿಸುವ ಕೆಲಸ ಚಾಲ್ತಿಯಲ್ಲಿದ್ದು ಟವರ್ ಮೂಲಕ ಯಾವುದೇ ಅಡೆತಡೆಯಿಲ್ಲದೇ ವಯರ್, ಸಿಮ್ ಗಳ ಗೋಜಿಲ್ಲದೇ ಬರೀ ಒಂದು ತಾಂತ್ರಿಕ ಉಪಕರಣದ ಮೂಲಕ ಈ ಸೇವೆ ಲಭ್ಯವಾಗಲಿದೆ. ಅದೂ ಬರೀ ರೂ.999 ಕ್ಕೆ ಈ ಸೇವೆ ಸಿಗಲಿದ್ದು, ಬಿಎಸ್ಎನ್ಎಲ್ ನ ಮಹತ್ವಪೂರ್ಣ ಯೋಜನೆ ಇದಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮೊಬೈಲ್ ಕಂಪೆನಿಗಳಿಗಿಂತ ವಿಭಿನ್ನ ಮಾದರಿಯ ಇಂಟರ್ನೆಟ್ ಸೇವೆ ಇದಾಗಿದ್ದು, ಎಲ್ಲಾ ನಗರಗಳಿಗೂ ಜಾರಿಯಾದರೆ ದೇಶದ ಇಂಟರ್ನೆಟ್ ವಲಯದಲ್ಲಿ ದೊಡ್ಡ ಸಂಚಲನ ಉಂಟಾಗಲಿದೆ ಎನ್ನುವುದಲ್ಲಿ ಅಚ್ಚರಿಯಿಲ್ಲ.













