ಹಿರಿಯಡ್ಕ: ಮಗಳ ಸಾವಿನ ಚಿಂತೆಯಲ್ಲಿ ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.12ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಪೆರ್ಡೂರು ಗ್ರಾಮದ ಲತಾ(52) ಎಂದು ಗುರುತಿಸಲಾಗಿದೆ. ಇವರ ಗಂಡ ಸುಮಾರು 20 ವರ್ಷದ ಹಿಂದೆ ಹೃದಯಾಘಾತವಾಗಿ ಮೃತ ಪಟ್ಟಿದ್ದು, 3 ತಿಂಗಳ ಹಿಂದೆ ತನ್ನ ಒಬ್ಬಳೇ ಮಗಳು ಮೆದುಳಿನ ಆಘಾತದಿಂದ ಮೃತಪಟ್ಟಿದ್ದರು. ಇದೇ ಚಿಂತೆಯಲ್ಲಿ ಮನನೊಂದ ಅವರು ಮನೆಯ ಮಲಗುವ ಕೋಣೆಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












