ಮಣಿಪಾಲ: ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್‌ ಗೆ ಪೊಲೀಸರ ದಾಳಿ; ಓರ್ವನ‌ ಬಂಧನ, ಮಹಿಳೆಯ ರಕ್ಷಣೆ

ಉಡುಪಿ: ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಣಿಪಾಲ ದಶರಥನಗರದ ಡಿ.ಕ್ಲಾಸಿಕೋ ಲಾಡ್ಜ್‌ ಮೇಲೆ ದಾಳಿ ನಡೆಸಿದ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಚುಮಾನ್‌ರಾಮ್‌ ಎಂದು ಗುರುತಿಸಲಾಗಿದೆ. ಡಿ.ಕ್ಲಾಸಿಕೋ ಲಾಡ್ಜ್‌ ನ ಒಂದನೆ ಮಹಡಿಯ ರೂಮ್‌ ನಂಬ್ರ 104ರಲ್ಲಿ ಬಲವಂತವಾಗಿ ಮಹಿಳೆಯರನ್ನು ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು‌ ದಾಳಿ ನಡೆಸಿದ್ದಾರೆ. ಈ ವೇಳೆ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.