ಬೆಂಗಳೂರು: ಬೆಂಗಳೂರು ತಿಪ್ಪಸಂದ್ರ ನಿವಾಸಿಗಳಾದ ಹೆಬ್ಬಿ ಕರುಣಾಕರ ಶೆಟ್ಟಿ ಮತ್ತು ಉಪ್ಪಿನಂಗಡಿ ಪೂಜಾ ಶೆಟ್ಟಿ ಯವರ ಪುತ್ರಿ ಕು. ಚಿನ್ಮಯಿ ಶೆಟ್ಟಿ (19 )ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ.
ಕು. ಚಿನ್ಮಯಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಆರ್ ಸಿಬಿ ತಂಡದ ವಿಜಯ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಆಕೆ ತಮ್ಮ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ.












