ಉಡುಪಿ: 2019-20ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ಈ ಕೆಳಕಂಡ ಸ್ಥಳಗಳಲ್ಲಿ ನಡೆಯಲಿದೆ.
ಸ್ಪರ್ಧೆಗಳು ನಡೆಯುವ ದಿನಾಂಕ, ಸ್ಥಳದ ವಿವರಗಳು:
ಸೆಪ್ಟಂಬರ್ 21 ರಂದು ಮಣಿಪಾಲ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಫುಟ್ಬಾಲ್ ಸ್ಪರ್ಧೆಯು ನಡೆಯಲಿದೆ.
ಸೆಪ್ಟಂಬರ್ 21 ಮತ್ತು 22 ರಂದು ಮಂಡ್ಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜೂಡೋ ಮತ್ತು ಟೇಕ್ವಾಂಡೋ ಸ್ಪರ್ಧೆಗಳಿಗೆ ನೇರ ಆಯ್ಕೆ ಪ್ರಕ್ರಿಯೆಯು ನಡೆಯಲಿದೆ.
ಸೆಪ್ಟಂಬರ್ 22 ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ ಸ್ಪರ್ಧೆಯ ನೇರ ಆಯ್ಕೆ ಪ್ರಕ್ರಿಯೆ, ಸೆಪ್ಟಂಬರ್ 24 ರಂದು ಹಾಕಿ ಸ್ಪರ್ಧೆಯು ನಡೆಯಲಿದೆ.
ಸೆಪ್ಟಂಬರ್ 22 ರಂದು ಉಡುಪಿ ಅಜ್ಜರಕಾಡು ಜಿಲ್ಲಾ ಈಜುಕೊಳ ಹಾಗೂ ಒಳಾಂಗಣ ಟೆನ್ನಿಸ್ ಅಂಕಣದಲ್ಲಿ ಈಜು ಮತ್ತು ಟೆನ್ನಿಸ್ ಸ್ಪರ್ಧೆಗಳು ನಡೆಯಲಿದೆ.
ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟಂಬರ್ 22 ರಂದು ಬಾಕ್ಸಿಂಗ್, ವುಷು, ಫೆನ್ಸಿಂಗ್ ಮತ್ತು ಆರ್ಚರಿ ಸ್ಪರ್ಧೆಗಳ ನೇರ ಆಯ್ಕೆ ಪ್ರಕ್ರಿಯೆಯು ನಡೆಯಲಿದೆ.
ಸೆಪ್ಟಂಬರ್ 25 ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಸ.ಪ.ಪೂ.ಕಾಲೇಜಿನಲ್ಲಿ ತ್ರೋಬಾಲ್, ಖೋ-ಖೋ, ಕಬಡ್ಡಿ ಮತ್ತು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿದೆ.
ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿ/ತಂಡಗಳು ವಿಭಾಗಮಟ್ಟದ ಸ್ಥಳಗಳಲ್ಲಿ ನಿಗದಿತ ದಿನಾಂಕದಂದು ಸಂಘಟಕರಲ್ಲಿ ವರದಿ ಮಾಡಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಕಚೇರಿ ದೂರವಾಣಿ ಸಂಖ್ಯೆ: 0820-2521324ನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.












