ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಉಡುಪಿ ಜಿಲ್ಲೆ, ರೋಟರಿ ಕ್ಲಬ್
ಕಟಪಾಡಿ ಹಾಗೂ ಎನ್.ಸಿ.ಸಿ ಘಟಕ ಎಸ್.ವಿ.ಎಸ್ ಪ್ರೌಢಶಾಲೆ ಕಟಪಾಡಿ ಇವರ ಸಹಭಾಗಿತ್ವದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಮಾದಕ ದ್ರವ್ಯ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ಶಿಬಿರವು ಶನಿವಾರ ಕಟಪಾಡಿಯ ಎಸ್.ವಿ.ಎಸ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ರೋಟರಿ ಸಹಾಯಕ ಗವರ್ನರ್ ಜಗನ್ನಾಥ ಕೋಟೆ ಕಾರ್ಯಕ್ರಮ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್ ವಿವಿಧ ತಂಬಾಕಿನ ಬಗ್ಗೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನಃಶಾಸ್ತ್ರಜ್ಞೆ ಕ್ಯಾಥರಿನ್ ಮಾದಕ ದ್ರವ್ಯ ವ್ಯಸನದ ಬಗ್ಗೆ, ಉಡುಪಿ ತಾಲೂಕು ಕ್ಷೇತ್ರ ಆರೋಗ್ಯ
ಶಿಕ್ಷಣಾಧಿಕಾರಿ ಚಂದ್ರಕಲಾ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅದಕ್ಕೆ ಇರುವ ಕಾಯಿದೆ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ತುಳಸಿ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸತ್ಯೇಂದ್ರ ಪೈ, ಶ್ರೀಕರ ಅಂಚನ್, ಗಣೇಶ್ ಕಿಣಿ,
ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಲಕ್ಷ್ಮೀ ನಿರೂಪಿಸಿ, ಶಂಕರ್ ಪೂಜಾರಿ ವಂದಿಸಿದರು.












