ಉಡುಪಿ: ರೋಟರಿ ಕ್ಲಬ್ ಮಣಿಪಾಲ ಟೌನ್ ಯೋಜನೆಯಾಗಿ ಮಕ್ಕಳ ಅಭಿವೃದ್ಧಿಗೆ ಬೆಂಬಲ, ಮಕ್ಕಳ ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುವ ಹಾಗೂ ಅಂಗನವಾಡಿ ಮಕ್ಕಳ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ರೋಟರಿ ಕ್ಲಬ್ ಮಣಿಪಾಲ ಟೌನ್ ವತಿಯಿಂದ ಹೊಸದಾಗಿ ನಿರ್ಮಿಸಲಾದ ಆಟದ ಪಾರ್ಕ್ ಜೂನ್ 1 ರಂದು ಬೆಳ್ಳಾರ್ಪಾಡಿ ಅಂಗನವಾಡಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ಯೋಜನೆ ರೋಟರಿ ಇಂಟರ್‌ನ್ಯಾಷನಲ್‌ನ “ಮೂಲ ಶಿಕ್ಷಣ ಮತ್ತು ಸಾಕ್ಷರತೆ” ಕೇಂದ್ರಕ್ಷೇತ್ರದಡಿ ಕೈಗೊಳ್ಳಲಾಯಿತು. ಈ ಯೋಜನೆಗಾಗಿ ರೋಟರಿ ಜಿಲ್ಲಾ ನಿಧಿ ಯಿಂದ ₹83,500 ರೂ. ಅನುದಾನ ಲಭಿಸಿತು. ಜೊತೆಗೆ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ನಾಗಸಂಪಿಗೆ ಅವರು ತಮ್ಮ ವೈಯಕ್ತಿಕ ದೇಣಿಗೆಯಾಗಿ ₹60,000 ರೂ. ನೀಡಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ಕೊಟ್ಟ ಸೇವೆಗೆ ಇದು ಒಂದು ಜೀವಂತ ಪ್ರತಿಬಿಂಬವಾಗಿದೆ.

ಚಿನ್ನರಿ ಲೋಕ ಹಸ್ತಾಂತರ ಕಾರ್ಯಕ್ರಮವು ರೂ. ಡಾ| ಮನೋಜ್ ಕುಮಾರ್ ನಾಗಸಂಪಿಗೆ ಅಧ್ಯಕ್ಷರು ರೋಟರಿ ಕ್ಲಬ್ ಮಣಿಪಾಲ್ ಟೌನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಮಾರಂಭದ ಮುಖ್ಯ ಅತಿಥಿ ಯಾಗಿ ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಆದ ರೂ.CA ದೇವಾನಂದ ಮತ್ತು ಕಾಪು ವಿಧಾನಸಭೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ರೋಟರಿ ಕ್ಲಬ್ ಮಣಿಪಾಲ್ ಟೌನ್ ಕಾರ್ಯ ಶೋಭಾ ನಾಗಸಂಪಿಗೆಯವರ ದಾನ ಬೆಳ್ಳಾರ್ಪಡಿಯ ಶಾಲೆಗೆ ಕಳೆ ನೀಡಿದೆ. ನಿಮ್ಮ ಸಾಮಾಜಿಕ ಕಳಕಳಿ ಅಭಿನಂದನಾರ್ಹ ಎಂದು ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ರೂ. ಜಗನಾಥ ಕೋಟೆ ಸಹಾಯಕ ಗವರ್ನರ್ ವಲಯ-೪ ಜಿಲ್ಲೆ ೩೧೮೨, ವಲಯ ಸೇನಾನಿ ರೊ. ನಾಗರಾಜ್ ಶೆಟ್ಟಿ, ಭೈರಂಪಳ್ಳಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಸಾದ್ ಮಲ್ಯ, ಶಾಲಾ ಮುಖ್ಯೋಪಾಧ್ಯರು ಶ್ರೀ ಸುರೇಶ್ ನಾಯ್ಕ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ವನಿತಾ ಎನ್ ಹೆಗ್ಡೆ , ಶ್ರೀಮತಿ ಶಕುಂತಲಾ,ಅಧ್ಯಕ್ಷರು ಅಂಗನವಾಡಿ ಬಾಲವಿಕಾಸ ಸಮಿತಿ ಬೆಳ್ಳಾರ್ಪಾಡಿ, ಶ್ರೀ ಶಿವರಾಮ ಶೆಟ್ಟಿ ಗೌರವ ಸದಸ್ಯರು ಅಂಗನವಾಡಿ ಬಾಲವಿಕಾಸ ಸಮಿತಿ, ದಾನಿಗಳಾದ ಶ್ರೀಮತಿ ಶೋಭಾ ನಾಗಸಂಪಿಗೆ, ಅಧ್ಯಕ್ಷರು ಆರ್ ಸಿ ಸಿ ಬೆಳ್ಳರ್ಪಾಡಿ ಶ್ರೀ ರೋಹಿತ್ ಶೆಟ್ಟಿ ರೋಟರಿ ಕ್ಲಬ್ ಮಣಿಪಾಲ್ ಟೌನ್ ಕಾರ್ಯದರ್ಶಿ ರೂ| ಡಾ ನವೀನ್ ಕುಮಾರ್ ಕೂಡಮಾರ ವೇದಿಕೆಮೇಲೆ ಉಪಸ್ಥಿತರಿದ್ದು ಸಮಾರಂಭದ ಮೆರುಗು ಹೆಚ್ಚಿಸಿದರು.
ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಮುಖಂಡರು, “ಮಕ್ಕಳಿಗೆ ಕೇವಲ ತರಗತಿಯಲ್ಲಿ ಪಾಠ ಕಲಿಸುವುದರಿಂದ ಸರಿಯಾದ ಬೆಳವಣಿಗೆ ಸಾಧ್ಯವಿಲ್ಲ. ಆಟ, ಗೆಳೆಯರ ಜೊತೆಗೆ ಸಮಯ ಕಳೆಯುವಿಕೆ, ಹೊರಾಂಗಣ ಚಟುವಟಿಕೆಗಳ ಮೂಲಕವೇ ಮಕ್ಕಳು ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಬೆಳೆಯುತ್ತಾರೆ,” ಎಂದು ತಿಳಿಸಿದರು.
ಈ ಪಾರ್ಕ್ ಮಕ್ಕಳನ್ನು ಆಕರ್ಷಿಸುವ ಮೂಲಕ ಹಾಜರಾತಿಯನ್ನು ಹೆಚ್ಚಿಸಲಿದೆ ಎಂಬ ನಿರೀಕ್ಷೆಯಿದೆ. ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸುವ ಪಾಠಗಳ ಜೊತೆಗೆ ಪಾರ್ಕ್ ಒಂದು ಆನಂದದ ಸ್ಥಳವಾಗಲಿದೆ.
ಈ ಸಂದರ್ಭ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಕು ಅನನ್ಯ ಇವರು ಎಸ್ ಎಸ್ ಎಲ್ ಸಿ ಯಲ್ಲಿ ೬೧೯/೬೨೫ ಅಂಕ ಪಡೆದು ಸಾಧನೆಗೈದ ಸ್ಥಳೀಯ ಪ್ರತಿಭೆಗೆ ಅಭಿನಂದಿಸಿ ಗೌರವಿಸಲಾಯಿತು ರೂ ಡಾ| ಮನೋಜ್ ಕುಮಾರ್ ನಾಗಸಂಪಿಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ರೂ| ನಿತ್ಯಾನಂದ ನರಸಿಂಗೆ ನಿರೂಪಿಸಿ ರೂ| ಡಾ ನವೀನ್ ಕುಮಾರ್ ಕೂಡಮಾರ ಕಾರ್ಯದರ್ಶಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮಣಿಪಾಲ ಟೌನ್‌ನ ಸದಸ್ಯರು, ರೂ|ಹಿಲ್ಡಾ ಕಾರ್ನಿಲಿಯೋ, ರೂ| ನಿತ್ಯಾನಂದ ಪಡ್ರೆ ಡಾ| ಶ್ರೀಧರ್ ಡಿ, ಡಾ| ಕುಮಾರ್ ಭಟ್, ಡಾ| ದೀಪಕ್ ರಾಮ್ ಬಾಯರಿ, ರೋ| ಮೋಹನ್ ನಾಯಕ್, ಡಾ|ಹುಬನ್ ಥಾಮಸ್ , ರೂ| ಸಮರೇಂದ್ರ ಭಟ್ಟಾಚಾರ್ಯ, ರೂ| ಶಿವಮೂರ್ತಿ, ರೂ | ಕವಿತಾ ನಾಗಸಂಪಿಗೆ ಕು| ಮಾನಸ , ಕು|ಮೃದುಲ್ಲಾ, ಕು | ಶ್ರಾವ್ಯ ನಾಯಕ್ ಸ್ಥಳೀಯ ಶ್ರೀ ಜಗದೀಶ್ ಬೆಳ್ಳರ್ಪಾಡಿ ಕೃಷ್ಣಾನಂದ ನಾಯಕ್ , ಶಿಕ್ಷಕರು, ಪಾಲಕರು ಮತ್ತು ಸಮುದಾಯದ ಪ್ರಮುಖರು ಭಾಗವಹಿಸಿದ್ದರು. ಈ ಯೋಜನೆ ರೋಟರಿ ಕ್ಲಬ್ ಮಣಿಪಾಲ ಟೌನ್ ಸಮೂಹದ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತೊಂದು ಮೈಲಿಗಲ್ಲು ಆಗಿದೆ.
ಕಾರ್ಯಕ್ರಮದ ಅಂತ್ಯದಲ್ಲಿ ಆಟದ ಪಾರ್ಕ್ ಅನ್ನು ಅಧಿಕೃತವಾಗಿ ಅಂಗನವಾಡಿಗೆ ಹಸ್ತಾಂತರಿಸಲಾಯಿತು. ಮಕ್ಕಳ ನಗು ಹಾಗೂ ಆಟದ ಕಿಕ್ಕಿರಿದ ಕ್ಷಣಗಳು ಎಲ್ಲರ ಮನವನ್ನು ಗೆದ್ದುವಿಟ್ಟವು.












