ಸಾಂಸ್ಕೃತಿಕ-ಕಲಾ ಚಟುವಟಿಕೆ ಹೃದಯ ಬೆಸೆಯುವ‌ ಮಾಧ್ಯಮ: ಅಂಬಾತನಯ ಮುದ್ರಾಡಿ

ಉಡುಪಿ: ಸಾಂಸ್ಕೃತಿಕ ಕಲಾ ಚಟುವಟಿಕೆಗಳು ಹೃದಯ ಬೆಸೆಯುವ ಮಾಧ್ಯಮವಾಗಿದ್ದು, ಇದರ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.
ಉಡುಪಿ ಸಂಸ್ಕೃತಿ ವಿಶ್ವಪ್ರತಿಷ್ಠಾನದ ವತಿಯಿಂದ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಸಂಸ್ಕೃತಿ ಪ್ರತಿಷ್ಠಾನದ ಉದ್ಘಾಟನೆ, ನಾಟಕೋತ್ಸವ, ಸಾಕ್ಷ್ಯ ಚಿತ್ರ ಬಿಡುಗಡೆ ಹಾಗೂ ಯುವ ಪ್ರತಿಭೆಗಳ ಭಾವಾಭಿವ್ಯಕ್ತಿ ಕಾರ್ಯಕ್ರಮದಲ್ಲಿ ‘ಉಡುಪಿ ವಿಶ್ವನಾಥ ಶೆಣೈ’ ಅವರ ಜೀವನ ಚರಿತ್ರೆ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಜಿ. ಶಂಕರ್‌ ಅವರು ಅಂಬಾತನಯ ಕಂಡ ‘ಅಹಲ್ಯಾ’ ಭಾವಯಾನ, ಏಕಾಯಣ, ರಂಗ ಪ್ರಯೋಗದ ಆಮಂತ್ರಣ ಬಿತ್ತಿ ಪತ್ರವನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಮಾಜ ಸೇವಕ ವಿಶ್ವನಾಥ ಶೆಣೈ, ಜಾದೂಗಾರ ಪ್ರೊ. ಶಂಕರ್‌, ರಂಗಕರ್ಮಿ ಜೀವನ್‌ ರಾಮ್‌ ಸುಳ್ಯ, ಉದ್ಯಮಿ ಎಂ.ಎಸ್‌. ವಿಷ್ಣು, ಉಡುಪಿ ಪ್ರೆಸ್‌ ಫೋಟೊಗ್ರಾಫರ್‌ ಅಸೋಸೀಯೇಶನ್‌ ಅಧ್ಯಕ್ಷ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.
ಶಿಲ್ಪ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಲಾವಿದೆ ಭಾವನ ಕೆರೆಮಠ ಅವರಿಂದ ಅಂಬಾತನಯ ಮುದ್ರಾಡಿ ಕಂಡ ‘ಅಹಲ್ಯಾ’ ಭಾವಯಾಮ, ಏಕಾಯಣ, ರಂಗ ಪ್ರಯೋಗ ನಡೆಯಿತು.