ತುಳುನಾಡಿನಲ್ಲಿ “ಕಾಲೆಕೋಲ” ಎಂಬ ವಿಶಿಷ್ಟ ಸಂಪ್ರದಾಯ

ಉಡುಪಿ: ತುಳುನಾಡಿನಲ್ಲಿ ಕುಟುಂಬದ ಹಿರಿಯರು ತೀರಿ ಹೋದಾಗ ಅಪರೂಪದ ಕಾಲೆಕೋಲ ಎಂಬ ಸಂಪ್ರದಾಯ ನಡೆಸಲಾಗುತ್ತದೆ. ಕುಟುಂಬವನ್ನು ಬಿಟ್ಟು ಹೋಗಲು ಒಪ್ಪದ ಪ್ರೇತವನ್ನು ಬಗೆ ಬಗೆಯಾಗಿ ಒಪ್ಪಿಸಿ ಬಿಳ್ಕೊಡುವ ಆಚರಣೆ ಇದಾಗಿದೆ. ಮೈ ಮೇಲೆ ಕಪ್ಪುಬಣ್ಣ ಧರಿಸಿದ ವೇಷದಾರಿಯು ಮೃತರಾದ ಹಿರಿಯ ಜೀವದ ಪಾತ್ರ ನಿರ್ವಹಿಸುತ್ತಾರೆ. ಕುಟುಂಬದೊಂದಿನ ಬಾಂಧವ್ಯವನ್ನು ಸಂಕೇತಿಸುವ ಅನೇಕ ಆಚರಣೆಗಳು ನಡೆಯುತ್ತದೆ.

ಇತ್ತೀಚೆಗೆ ಉಡುಪಿಯ ಅಲೆವೂರಿನಲ್ಲಿ ನಿಧನರಾದ ಹಿರಿಯ ಜೀವ ನಾಗಸ್ವರ ಕಲಾವಿದ ಬೊಗ್ರ ಸೇರಿಗಾರರನ್ನು ಇಹ ಲೋಕದಿಂದ ಬೀಳ್ಕೊಡುವ ಕಾಲೆ ಕೋಲ ನಡೆಯಿತು. ಬೊಗ್ರ ಸೇರಿಗಾರರ ಮೊಮ್ಮಗ ಸ್ವತಹ ತಾನೇ ನಾಗಸ್ವರ ನುಡಿಸುವ ಮೂಲಕ ಈ ದೈವದ ಆಚರಣೆಗೆ ಹೊಸ ಕಳೆ ನೀಡಿದ್ದು ವಿಶೇಷವಾಗಿತ್ತು.

.