ಬಂಟಕಲ್: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ
ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ
ವಿಭಾಗವು ಸೆಮಿಕಂಡಕ್ಟರ್ ವಿನ್ಯಾಸ ಸೇವೆಗಳು ಮತ್ತು
ಎಂಬೆಡೆಡ್ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ
ಪ್ರಮುಖ ತಂತ್ರಜ್ಞಾನ ಸಲಹಾ ಕಂಪೆನಿಯಾದ ಮಿರಾಫ್ರಾ
ಟೆಕ್ನಾಲಜೀಸ್, ಬೆಂಗಳೂರು ಇದರ ಜೊತೆ ಒಡಂಬಡಿಕೆಗೆ ಸಹಿ
ಹಾಕಿತು. ಈ ಪಾಲುದಾರಿಕೆಯು ಶೈಕ್ಷಣಿಕ ಕಲಿಕೆ ಮತ್ತು
ಉದ್ಯಮದ ಅವಶ್ಯತೆಗಳ ನಡುವಿನ ಅಂತರವನ್ನು ಕಡಿಮೆ
ಮಾಡುವ ಗುರಿಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳಿಗೆ
ಪ್ರಾಯೋಗಿಕ ಮಾನ್ಯತೆಯನ್ನು ಒದಗಿಸಿ
ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ
ಕಾರ್ಯನಿರ್ವಾಹಣ ಅಧಿಕಾರಿಯಾದ ಡಾ. ರಾಧಕೃಷ್ಣ ಐತಾಳ್ ಇವರ ಉಪಸ್ಥಿತಿಯಲ್ಲಿ ಮಿರಾಫ್ರಾ ಟೆಕ್ನಾಲಜೀಸ್ ಉಪಾಧ್ಯಕ್ಷರಾದ ಶ್ರೀ ವಿನೋದ್ ಜಾನ್ ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ಇವರು ಈ ಒಡಂಬಡಿಕೆಗೆ ಸಹಿ ಹಾಕಿದರು.

ಈ ಒಪ್ಪಂದದಡಿಯಲ್ಲಿ, ಮಿರಾಫ್ರಾ ಟೆಕ್ನಾಲಜೀಸ್ ವಿದ್ಯಾರ್ಥಿಗಳ
ಆಯ್ಕೆ ಪ್ರಕ್ರಿಯೆ ನಡೆಸಿ, ಅರ್ಹ ವಿದ್ಯಾರ್ಥಿಗಳಿಗೆ
ಉದ್ಯೋಗಾವಕಾಶಗಳನ್ನು ನೀಡುತ್ತದೆ ಹಾಗೂ
ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಗೆ ಭೇಟಿನೀಡಲು ಅವಕಾಶ
ಕಲ್ಪಿಸಿಸುತ್ತದೆ ಇದರಿಂದಾಗಿ ವಿದ್ಯಾರ್ಥಿಗಳು ಕೈಗಾರಿಕಾ
ಅಭ್ಯಾಸಗಳ ಮತ್ತು ತಂತ್ರಜ್ಞಾನಗಳ ಅನುಭವವನ್ನು
ಪಡೆಯಲು ಅನುಕೂಲವಾಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ
ಇತ್ತೀಚಿನ ಉದ್ಯಮ ಪ್ರವೃತ್ತಿಗಳು ಮತ್ತು ಅಭ್ಯಾಸಗಳ
ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುವ
ನಿರೀಕ್ಷೆಯಿದೆ, ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್‌ನಲ್ಲಿ
ಯಶಸ್ವಿ ವೃತ್ತಿಜೀವನಕ್ಕೆ ಅವರನ್ನು ಸಿದ್ಧಪಡಿಸುತ್ತದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ
ಮಿರಾಫ್ರಾ ಟೆಕ್ನಾಲಜೀಸ್, ಸೆಮಿಕಂಡಕ್ಟರ್ ಮತ್ತು ಎಂಬಡೆಡ್
ಸಿಸ್ಟಮ್ಸ್ ವಲಯಗಳಲ್ಲಿ ಹೆಚ್ಚು ಅನುಭವವನ್ನು ಹೊಂದಿದೆ.
ಹೈದರಾಬಾದ್, ಚೆನ್ನೈ, ಪುಣೆ, ಯುನೈಟೆಡ್ ಸ್ಟೇಟ್ಸ್,
ಸಿಂಗಾಪುರ ಮತ್ತು ಸ್ವೀಡನ್‌ನಲ್ಲಿ ಕಚೇರಿಗಳನ್ನು ಹೊದಿದೆ.
ಕಂಪೆನಿಯು ASIC ವಿನ್ಯಾಸದಲ್ಲಿನ ತನ್ನ ಪರಿಣತಿಗೆ
ಹೆಸರುವಾಸಿಯಾಗಿದೆ ಮತ್ತು ವಿವಿಧ ಕೈಗಾರಿಕೆಗಳಲ್ಲಿ ನವೀನ
ಪರಿಹಾರಗಳನ್ನು ನೀಡುವ 1000 ಕ್ಕೂ ಹೆಚ್ಚು ಇಂಜಿನಿಯರ್‌ಗಳ ತಂಡವನ್ನು ಹೊಂದಿದೆ.
ಈ ಒಡಂಬಡಿಕೆಯಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ.
ಗಣೇಶ್ ಐತಾಳ್, ಡೀನ್‌ಗಳು ಮತ್ತು ವಿದ್ಯುನ್ಮಾನ ಮತ್ತು
ಸಂವಹನ ವಿಭಾಗದ ಮುಖ್ಯಸ್ಥರಾದ ಶ್ರೀ ಅರುಣ್ ಉಪಾಧ್ಯಾಯ ಉಪಸ್ಥಿತರಿದ್ದರು.













