ಉಡುಪಿ: ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಬ್ರಹಂದೇವ್ ಯಾದವ್(37) ಬಂಧಿತ ಆರೋಪಿ.
ಈತನನ್ನು ಮಣಿಪಾಲ ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ಡಯಾನಾ ಟಾಕೀಸ್ ರಸ್ತೆಯ ಕ್ರಾಸ್ ಬಳಿ ಬಂಧಿಸಿ, 690 ಗ್ರಾಂ ಗಾಂಜಾ, ಮೊಬೈಲ್ ಪೋನ್, 680ರೂ. ಮತ್ತು ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 68,680 ರೂ. ಎಂದು ಅಂದಾಜಿಸಲಾಗಿದೆ.












