ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಬ್ರಾಹ್ಮಿ ಸಭಾಭವನ ದಲ್ಲಿ ಸಮಾಜ ಬಾಂಧವರಲ್ಲಿರುವ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಹಾಗೂ ವಿಪ್ರಸಮ್ಮಿಲನಕ್ಕಾಗಿ ವಿಪ್ರೋತ್ಸವ 2025 ನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಯನ್ನು ಉಡುಪಿ ಜಿಲ್ಲೆಯ ಎಲ್ಲಾ ತ್ರಿಮತಸ್ಥ ವಿಪ್ರ ಬಾಂಧವರಿಗಾಗಿ 40ವರ್ಷದ ಒಳಗಿನವರಿಗೆ ಹಾಗೂ 40 ವರ್ಷ ಮೇಲ್ಪಟ್ಟು ಈ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಇದರಲ್ಲಿ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ಈ ಜಾನಪದ ನೃತ್ಯ ಸಂಭ್ರಮವನ್ನು ಶ್ರೀ ಕ್ಷೇತ್ರ ಕಟೀಲಿನ ಅರ್ಚಕರಾದ ಶ್ರೀ ಹರಿನಾರಾಯಣ ಆಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಬ್ರಾಹ್ಮಣರು ತಮ್ಮ ಜಪ, ತಪ, ಅಧ್ಯಯನ ನಿತ್ಯಅನುಷ್ಠಾನದಲ್ಲಿ ನಿರತರಾಗಿದ್ದುಕೊಂಡು ಯಾವತ್ತೂ ಲೋಕದ ಹಿತವನ್ನೇ ಬಯಸುವವರಾಗಿದ್ದು ಯಾವುದೇ ನಿಂದನೆಯನ್ನು ಗಣನೆಗೆ ತೆಗೆದುಕೊಳ್ಳದೆ ಸಮಸ್ತ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದುಕೊಂಡು ಅನ್ಯರಿಗೆ ಮಾದರಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಪಾಕಶಾಲಾ ಹೋಟೆಲ್ ಉದ್ಯಮದ ನಿರ್ದೇಶಕರಾದ ಶ್ರೀಮತಿ ವಿನೋದ ವಾಸುದೇವ ಅಡಿಗ, ಪರಿಷತ್ತಿನ ಪೂರ್ವ ಅಧ್ಯಕ್ಷ ಎಂ.ಎಸ್. ವಿಷ್ಣು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಪರಿಷತ್ತಿನ ಬೆಳವಣಿಗೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಜ್ಯೋತಿಲಕ್ಷ್ಮಿ ಪ್ರಾರ್ಥಿಸಿದರು. ವಿಷ್ಣುಪ್ರಸಾದ್ ಪಾಡಿಗಾರು ಪ್ರಾಸ್ತಾವಿಸಿ ಅಧ್ಯಕ್ಷರಾದ ಚಂದ್ರಕಾಂತ್ ಕೆ. ಎನ್. ಸ್ವಾಗತಿಸಿದರು. ಚೈತನ್ಯ ಎಂ. ಜಿ. ಕಾರ್ಯಕ್ರಮವನ್ನು ನಿರೂಪಿಸಿದರು.
ಅದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ ಕೆ. ಎನ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭೀಮ ಗೋಲ್ಡ್ ಸಂಸ್ಥೆಯ ಮುಖ್ಯಸ್ಥ ಶ್ರೀ ಗುರುಪ್ರಸಾದ್ ರಾವ್, ಕರ್ನಾಟಕ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಕೆ. ವಾದಿರಾಜ ಭಟ್, ಭಾವೀ ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಉದಯ ಕುಮಾರ ಸರಳತ್ತಾಯ ಮತ್ತು ಪರಿಷತ್ತಿನ ಪೂರ್ವಾಧ್ಯಕ್ಷರಾದ ಶಶಿಧರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಜಿಲ್ಲಾ ಮಟ್ಟದ ಜಾನಪದ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಬಹುಮಾನ ವಿಜೇತರ ಮಾಹಿತಿ ಹೀಗಿದೆ.
40 ವರ್ಷದ ಒಳಗಿನ ವಿಭಾಗ
ಪ್ರಥಮ:
ಚಿಟ್ಪಾಡಿ ವಲಯ ಬ್ರಾಹ್ಮಣ ಮಹಾಸಭಾ
ದ್ವಿತೀಯ: ಪುತ್ತೂರು ವಲಯ ಬ್ರಾಹ್ಮಣ ಮಹಾಸಭಾ
ತೃತೀಯ: ಬೈಲೂರು ವಲಯ ಬ್ರಾಹ್ಮಣ ಮಹಾಸಭಾ
40 ವರ್ಷ ಮೇಲಿನ ವಿಭಾಗ
ಪ್ರಥಮ: ಪುತ್ತೂರು ವಲಯ ಬ್ರಾಹ್ಮಣ ಮಹಾಸಭಾ
ದ್ವಿತೀಯ: ಕನರ್ಪಾಡಿ ಬ್ರಾಹ್ಮಣ ಮಹಾಸಭಾ.
ಶ್ರೀ ಲಕ್ಷ್ಮಿನಾರಾಯಣ ಉಪಾಧ್ಯಾಯ ಪಾಡಿಗಾರು ಪ್ರಾರ್ಥಿಸಿ, ಚೈತನ್ಯ ಎಂ ಜಿ ಕಾರ್ಯಕ್ರಮ ನಿರೂಪಿಸಿದರು. ರವಿರಾಜ ರಾವ್, ಕೆ ರಘುಪತಿ ರಾವ್, ಮುರಳಿ ಅಡಿಗ, ದುರ್ಗಾ ಪ್ರಸಾದ್, ಪದ್ಮಲತಾ ವಿಷ್ಣು, ಸುನೀತಾ ಚೈತನ್ಯ, ರಾಧಿಕಾ ಚಂದ್ರಕಾಂತ್, ಅನುಪಮಾ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.












