ಉಡುಪಿ: ಮಳೆಯ ಅವಾಂತರ; ಆತ್ರಾಡಿ ಮದಗದ ರಸ್ತೆಗಳಿಗೆ ಹಾನಿ.

ಉಡುಪಿ: (ಮೇ.20) ಬೆಳಿಗ್ಗೆ ಸುರಿದ ಭಾರಿ ಮಳೆಗೆ ರಾಷ್ಟೀಯ ಹೆದ್ದಾರಿ 169ಎ ಯ ಆತ್ರಾಡಿ ಮದಗದ ಸ್ವಾಗತ ಗೋಪುರದಿಂದ ಪರೀಕಕ್ಕೆ ಹೋಗುವ ರಸ್ತೆಗೆ ಬಹಳ ಹಾನಿಯಾಗಿದ್ದು, ರಸ್ತೆಯ ಅಡಿಪಾಯಕ್ಕೆ ಹಾಕಿರುವ ಮಣ್ಣು ನೀರಲ್ಲಿ ಕೊಚ್ಚಿ ಹೋಗಿದ್ದು ರಸ್ತೆಯು ಯಾವದೇ ಕ್ಷಣದಲ್ಲಿ ಕುಸಿಯಬಹುದಾಗಿದೆ. ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಸ್ಥಗಿತ ಗೊಳಿಸಲಾಗಿದೆ ಸ್ವಾಗತ ಗೋಪುರದ ತಳಪಾಯಕ್ಕೆ ಹಾಕಿರುವ ಮಣ್ಣು ನೀರಲ್ಲಿ ಕೊಚ್ಚಿ ಹೋಗಿರುತ್ತದೆ. ಅಷ್ಟೇ ಅಲ್ಲದೆ ಪಕ್ಕದ ಜಯರಾಮ ಪ್ರಭು ರವರ ಮನೆ ರಸ್ತೆಗೆ ಪೂರ್ತಿ ಹಾನಿಯಾಗಿದೆ ಮತ್ತು ಹಲವು ಮನೆಗಳ ಅಂಗಳ ಕೆಸರುಮಾಯವಾಗಿದೆ.

ರಸ್ತೆಯ ಕಂಟ್ರಾಕ್ಟರ್ ಗಳು, ಜನ ಪ್ರತಿನಿದಿಗಳು ಮತ್ತು ಜಿಲ್ಲಾಡಳಿತ ವು ಕೂಡಲೇ ಸ್ಪಂದನೆ ನೀಡಬೇಕೆಂದು ಜನರ ಅಭಿಪ್ರಾಯವಾಗಿದೆ.