ಮಣಿಪಾಲ: ಗಾಳಿಮಳೆಯ ಹೊಡೆತಕ್ಕೆ ಕಿತ್ತುಹೋದ ಐನಾಕ್ಸ್ ಮುಂಭಾಗದ ರಸ್ತೆ: ಗಂಟೆಗಟ್ಟಲೇ ಟ್ರಾಫಿಕ್ ಜಾಮ್

ಉಡುಪಿ: ಧಾರಾಕಾರವಾಗಿ ಸುರಿಯುತ್ತಿರುವ ಗಾಳಿಮಳೆಯ ಹೊಡೆತಕ್ಕೆ ಮಣಿಪಾಲದ ಐನಾಕ್ಸ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಕಿತ್ತುಹೋಗಿದೆ.

ಅಪಾರ ಪ್ರಮಾಣದಲ್ಲಿ ಮಳೆಯ ನೀರು ರಸ್ತೆಯಲ್ಲೇ ಹರಿದುಹೋಗುತ್ತಿದ್ದು, ನೀರಿನ ರಭಸಕ್ಕೆ ರಸ್ತೆ ಕಿತ್ತುಹೋಗಿ ತೋಡಾಗಿ ಮಾರ್ಪಟ್ಟಿದೆ. ಇದರಿಂದ ವಾಹನ ಸವಾರರಿಗೆ ಮುಂದಕ್ಕೆ ಚಲಿಸಲು ಆಗದೆ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಇದೇ ರೀತಿ ಮಳೆ ಮುಂದುವರಿದರೆ ಮಣಿಪಾಲ ಐನಾಕ್ಸ್ ಮುಂಭಾಗದ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗುವ ಸಾಧ್ಯತೆ ಇದೆ. ಮಳೆನೀರು ಹೋಗಲು ಬೇರೆ ಜಾಗವಿಲ್ಲದೆ, ಹೆದ್ದಾರಿಯಲ್ಲೇ ಹರಿದು ಹೋಗುತ್ತಿದೆ.