ಬೆಂಗಳೂರು: ಈವರೆಗೂ ನೂರಾರು ವಿಕ್ರಮಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಈಗ ಮತ್ತೊಂದು ವಿಕ್ರಮಕ್ಕೆ ಸಾಕ್ಷಿಯಾಗಲಿದೆ. ಮೇ ಇಂದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C61/EOS-09 ಕಾರ್ಯಾಚರಣೆಯೊಂದಿಗೆ ತನ್ನ 101ನೇ ಉಪಗ್ರಹವನ್ನು ಉಡಾವಣೆ ಮಾಡಲಿದೆ.
ಈ ಕಾರ್ಯಾಚರಣೆಯಡಿಯಲ್ಲಿ ವಿಜ್ಞಾನಿಗಳು ಭಾರತದ ಎಲ್ಲಾ ಹವಾಮಾನ ಭೂ ವೀಕ್ಷಣಾ ಸಾಮರ್ಥ್ಯ ಹೊಂದಿರುವ ಉಪಗ್ರಹವನ್ನು ಸೂರ್ಯನ ಸಿಂಕ್ರೊನಸ್ ಧ್ರುವ ಕಕ್ಷೆಯಲ್ಲಿ ಇರಿಸಲಿದ್ದಾರೆ.
ಇಂದು ಬೆಳಗ್ಗೆ 5.59ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆ ನಿಗದಿಯಾಗಿದೆ.
ಇಸ್ರೋ ಹಂಚಿಕೊಂಡ ಮಾಹಿತಿಯ ಪ್ರಕಾರ, ಉಡಾವಣಾ ವಾಹನವು 44.5 ಮೀಟರ್ ಎತ್ತರವಾಗಿದೆ ಮತ್ತು 321 ಟನ್‌ಗಳಷ್ಟು ಲಿಫ್ಟ್ ಆಫ್ ದ್ರವ್ಯರಾಶಿಯನ್ನು ಹೊಂದಿದೆ. ಇದು ಇಸ್ರೋ ನಿರ್ಮಿಸಿದ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲು-ರಾತ್ರಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳ ಸೆರೆಹಿಡಿಯಲು ಅನುವು ಮಾಡಿಕೊಡಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ನಾಳೆ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಲಿದೆ.












