ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡಾಕೂಟ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡು ಇಲ್ಲಿ ಜರುಗಿತು.
ಕ್ರೀಡೋತ್ಸವಕ್ಕೆ ಅತಿಥಿಗಳಾಗಿ ಶ್ರೀಮತಿ ಶಾಲಿನಿ ರಾಜೇಶ್ ಶೆಟ್ಟಿ ,ಹಿರಿಯ ದೈಹಿಕ ನಿರ್ದೇಶಕರು ಯುನೈಟೆಡ್ ಉಡುಪಿ ಇವರು ವಿದ್ಯಾರ್ಥಿಗಳಿಗೆ ದೈಹಿಕ ಚಟುವಟಿಕೆ ಎಂಬುದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ನಮ್ಮ ಪ್ರತಿಭೆಯನ್ನು ಹೊರ ಹಾಕುವಲ್ಲಿ ಅವಕಾಶವನ್ನು ನೀಡುತ್ತದೆ ಎಂದು ತಿಳಿಸಿದರು.

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಹಾಗೂ ನಿರ್ದೇಶಕಿಯಾದ ಶೀಮತಿ ಮಮತಾ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ನೀಡಿದರು.
ಪ್ರಾಂಶುಪಾಲರಾದ ಡಾ. ಸೀಮಾ.ಜಿ ಭಟ್ ,ಉಪಪ್ರಾಂಶುಪಾಲೆ ಶ್ರೀಮತಿ ಸುಜಾತ ಹಾಗೂ ಕ್ರೀಡಾ ಸಂಯೋಜಕರಾದ ಶ್ರೀ ನಿತಿನ್ ಶೆಣೈ ಮತ್ತು ಶ್ರೀ ಮನೋಜ್ ಕುಮಾರ್ ,ಅನ್ಸೀಟಾ ಮತ್ತು ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು.












