ಆಪರೇಷನ್ ಸಿಂಧೂರ: ಪಾಕಿಸ್ತಾನದ ಹೃದಯ ಭಾಗದಲ್ಲೇ ಭಾರತ ನಡೆಸಿದ ಧೈರ್ಯಶಾಲಿ ನಿಖರ ದಾಳಿ

ಇತಿಹಾಸದಲ್ಲಿಯೇ ಅತ್ಯಂತ ಧೈರ್ಯಶಾಲಿ ಸೈನಿಕ ಕಾರ್ಯಾಚರಣೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿರುವ ‘ಆಪರೇಷನ್ ಸಿಂಧೂರ’ ಮೂಲಕ ಭಾರತ ಶತ್ರು ಭೂಮಿಗೆ ನಿಖರ ದಾಳಿ ನಡೆಸುವ ತನ್ನ ಅಪೂರ್ವ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸಿದೆ. ಮೇ 7ರಂದು ಆರಂಭಗೊಂಡ ಈ ಕಾರ್ಯಾಚರಣೆ ಪಾಕಿಸ್ತಾನ ಮತ್ತು ಪಾಕ್‌ ಅಕ್ರಮಿತ ಕಾಶ್ಮೀರದ ಒಂಬತ್ತು ಪ್ರಮುಖ ಉಗ್ರ ಕ್ಯಾಂಪ್ ಗಳು ಮತ್ತು ಸೈನಿಕ ಸೌಲಭ್ಯಗಳನ್ನು ಗುರಿಯಾಗಿಸಿ ನಾಶಪಡಿಸಿದೆ.

ಪಹಲ್ಗಾಂನಲ್ಲಿ ನಡೆದ ಹಿಂದು ಯಾತ್ರಿಕರ ಹತ್ಯಾಕಾಂಡಕ್ಕೆ ಪ್ರತಿಯಾಗಿ ಕೈಗೊಂಡ ಈ ನಿರ್ಧಾರಾತ್ಮಕ ಕಾರ್ಯಾಚರಣೆ, ಪಾಕಿಸ್ತಾನದ ಸೇನಾ ವ್ಯವಸ್ಥೆಯಲ್ಲಿ ಭೀತಿಯ ಅಲೆಗಳನ್ನು ಉಂಟುಮಾಡಿದ್ದು, ಪಾಕಿಸ್ತಾನದ ಸೈನಿಕ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ಅವರು ಭಾರತೀಯ DGMO ಅವರನ್ನು ಸಂಪರ್ಕಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಭಾರತೀಯ ದಾಳಿಗಳ ತೀವ್ರತೆ ಹಾಗೂ ನಿಖರತೆಯನ್ನು ಜಗತ್ತಿಗೆ ತೋರಿಸಿದೆ.

ಪಾಕಿಸ್ತಾನದ ಅಣ್ವಾಯುಧ ಶಕ್ತಿಯ ಹೃದಯ ಭಾಗದಲ್ಲೇ ನಿಖರ ದಾಳಿ

ಆಪರೇಷನ್ ಸಿಂಧೂರದ ವಿಶಿಷ್ಟತೆ ಕೇವಲ ಉಗ್ರ ಕ್ಯಾಂಪುಗಳ ಸಂಖ್ಯೆ ಅಲ್ಲ, ಬದಲಾಗಿ ಭಾರತ ಗುರಿಯಾಗಿಸಿದ ಪ್ರದೇಶಗಳೂ ಅತ್ಯಂತ ಸೂಕ್ಷ್ಮ ಮತ್ತು ನಿಖರವಾಗಿತ್ತು. ಭಾರತ ತನ್ನ ವಾಯುಪಡೆಯ ಮೂಲಕ ಸರ್ಗೋಧಾ ವಾಯುನೆಲೆ (ಪಾಕಿಸ್ತಾನದ ಅಣ್ವಾಯುಧ ಸಂಗ್ರಹ ಕೇಂದ್ರ), ಮುಷಾಫ್ ಬೇಸ್ (ಪಾಕಿಸ್ತಾನದ ಎಲಿಟ್ ಎಸ್ಕ್ವಾಡ್ರನ್ ಗಳು ಇರುವ ತಾಣ) ಮತ್ತು ಕರಾಚಿಯ ಸಮೀಪದ ಭೋಲಾರಿ (ಮುಖ್ಯ ರಡಾರ್ ಮತ್ತು ಬೆಂಬಲ ವ್ಯವಸ್ಥೆಗಳ ಕೇಂದ್ರ) ಮೊದಲಾದ ಪ್ರದೇಶಗಳಮ್ಮು ಗುರಿಯಾಗಿಸಿ ಯಶಸ್ವಿಯಾಗಿ ಹೊಡೆದುರುಳಿಸಿದೆ.

ಈ ದಾಳಿಗಳು ಯಾವುದೇ ಪ್ರತಿರೋಧವಿಲ್ಲದೆ ಯಶಸ್ವಿಯಾಗಿದ್ದು, ಭಾರತದ ವಾಯು ಸಂರಕ್ಷಣಾ ಪ್ರವೇಶ, ಎಲೆಕ್ಟ್ರಾನಿಕ್ ಯುದ್ಧ ತಂತ್ರಗಳು ಮತ್ತು ನಿಖರ ದಾಳಿಗಳಲ್ಲಿ ಭಾರತದ ಸಾಮರ್ಥ್ಯವನ್ನು ತೋರಿಸಿದೆ. ಪಾಕಿಸ್ತಾನದ ಅಣ್ವಾಯುಧ ಬೆದರಿಕೆಯ ಹಿಂದಿನ ಉದ್ದೇಶವನ್ನು ಭಾರತ ಖಡಾಖಂಡಿತವಾಗಿ ವಿರೋಧಿಸಿದ್ದು, ಉಗ್ರರಿಗೆ ಆಶ್ರಯ ನೀಡುವ ಈ ತಂತ್ರವನ್ನು ಖಂಡಿಸಿದೆ.

ಜಗತ್ತಿಗೆ ಬೇರೊಂದು ಸಂದೇಶ

ಪ್ರಮುಖ ರಕ್ಷಣಾ ವಿಶ್ಲೇಷಕರ ಪ್ರಕಾರ, ಆಪರೇಷನ್ ಸಿಂಧೂರ ಭಾರತ ಜಗತ್ತಿಗೆ ಹಲವು ರೀತಿಯ ಸಂದೇಶವನ್ನು ನೀಡಿದೆ. ತನ್ನ ತತ್ವ ಚಟುವಟಿಕೆಯಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸಿದೆ. ಈಗ ಭಾರತ ತನ್ನ ಪ್ರಜೆಗಳು ಮತ್ತು ದೇಶವನ್ನು ಗುರಿಯಾಗಿಸಿದರೆ ಯಾವುದೇ ಸಾಂಪ್ರದಾಯಿಕ ಮಿತಿಯನ್ನು ಮೀರಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕದು ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನ ಮಾತ್ರವಲ್ಲದೆ ಜಗತ್ತಿಗೂ ನೀಡಿದೆ.

ಈ ಕಾರ್ಯಾಚರಣೆ ಕೇವಲ 23 ನಿಮಿಷಗಳ ಗಟ್ಟಿಯಾದ, ಸೂಕ್ಷ್ಮ ಯೋಜಿತ ಕಾಲಾವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು, ನಾಗರಿಕರಿಗೆ ಹಾನಿಯಾಗದೆ, ಪಾಕಿಸ್ತಾನದ ಉಗ್ರ ಮತ್ತು ಸೈನಿಕ ಮೂಲ ಬೇರನ್ನೇ‌ ಹುಡುಕಿ ಅದರ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಿತು.

ಪಾಕಿಸ್ತಾನದಿಂದ ನಡೆದ ಪ್ರತಿದಾಳಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿದರೂ ಅದು ವಿಫಲವಾಯಿತು. ಭಾರತ ತನ್ನ ವಾಯುಸಂರಕ್ಷಣಾ ವ್ಯವಸ್ಥೆಯನ್ನು ಸಜ್ಜುಗೊಳಿಸಿದ್ದು, ಯಾವುದೇ ಮುಂದಿನ ಎಸ್ಕಲೇಶನ್‌ಗೆ ಇನ್ನಷ್ಟು ಬಿಗಿಯಾದ ಪ್ರತಿಕ್ರಿಯೆ ನೀಡುವುದಾಗಿ ಸ್ಪಷ್ಟಪಡಿಸಿದೆ.

ಭಾರತದ ಸಂಕಲ್ಪ- ಸಾಮಾರ್ಥ್ಯದ ಗಟ್ಟಿತನ

ರಾಜಕೀಯ ನಾಯಕರು ಸಹಿತ ಸೇನಾ ವರಿಷ್ಠರ ತನಕ ಭಾರತ ತನ್ನ ತಂತ್ರಜ್ಞಾನ ಸಾಮರ್ಥ್ಯ ಮತ್ತು ಸೈನಿಕ ತಂತ್ರಜ್ಞಾನದ ಶಕ್ತಿ ತೋರಿಸಿದೆ. ಆಪರೇಷನ್ ಸಿಂಧೂರ ಸೈನಿಕ ಕಾರ್ಯಚರಣೆಯ ಜತೆಗೆ—ಇದು ಭಾರತ ತನ್ನ ಪ್ರಜೆಗಳು ಮತ್ತು ಸ್ವಾಭಿಮಾನವನ್ನು ರಕ್ಷಿಸಲು ಭಯಪಡುವುದಿಲ್ಲ ಎಂಬ ಸಂದೇಶವೂ ಹೌದು. ಇಡೀ ದೇಶವೇ ಶತ್ರು ರಾಷ್ಟ್ರಕ್ಕೆ ತೀವ್ರ ಪ್ರತಿಕ್ರಿಯೆ ನೀಡುವ ಘೋಷಣೆ ಮಾಡಿತ್ತು.

ಭಾರತವನ್ನು ಬೇರೆ ರೀತಿಯಲ್ಲಿ ನೋಡುತ್ತಿದ್ದ ಜಗತ್ತಿಗೆ ಹೊಸ ಭಾರತದ ಮತ್ತು ಬದಲಾದ ಭಾರತ ಏನೆಂದು ಯುದ್ಧ ಕಾರ್ಯಾಚರಣೆಯ ಮೂಲಕ ತೋರಿಸಿದೆ. ನಿಖರ, ನಿರ್ಧಾರಾತ್ಮಕ ಮತ್ತು ಭಾರತೀಯ ಪ್ರಜೆಗಳ ರಕ್ಷಣೆಯಲ್ಲಿ ಆಪರಾಧಿಗಳಿಗೆ ಭಾರತ ವಿರೋಧಿಗಳಿಗೆ ಪಾಠ ಕಲಿಸಲು ಯಾವ ರೀತಿ ಹಿಂಜರಿಕೆಯೂ ಇಲ್ಲ‌ ಎಂಬುದನ್ನು ಸ್ಪಷ್ಟಪಡಿಸಿದೆ.

ಬರಹ: ಅಜಯ್ ಪುರುಷೋತ್ತಮ್ ಶೆಟ್ಟಿ