ಕಾಪು:ಕಾಂಗ್ರೆಸ್ ಪಕ್ಷದ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮಹಾತ್ಮಾ ಗಾಂಧಿ, ಅಂಬೇಡ್ಕರ್ ಸಿದ್ಧಾಂತ, ದೇಶಕ್ಕಾಗಿ ಹೋರಾಟ, ಬಲಿದಾನ ಮಾಡಿದ ಹೆಗ್ಗಳಿಕೆ, ಇತಿಹಾಸ ಇರುವ ಪಕ್ಷ ಕಾಂಗ್ರೆಸ್. ಇಂತಹ ಮಹಾನ್ ರಾಜಕೀಯ ಪಕ್ಷದ ಸಂಘಟನೆಗಾಗಿ ನಾಯಕರು, ಕಾರ್ಯಕರ್ತರು ಸಮರ್ಪಣಾ ಮನೋಭಾವದೊಂದಿಗೆ ಸಂಘಟನಾ ಕಾರ್ಯದಲ್ಲಿ ಕಾರ್ಯೋಣ್ಮುಖರಾದಲ್ಲಿ ಪಕ್ಷವು ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಕೆ. ಪಿ. ಸಿ. ಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.
ಅವರು ಸೋಮವಾರ ಕಾಪು – ರಾಜೀವ್ ಭವನ ದಲ್ಲಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ವೈ. ಸುಕುಮಾರ್ ರವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಭಿನಂದನೆ ಸಲ್ಲಿಸಿ ಮಾತನಾಡುತ್ತಾ, ನಿರ್ಗಮನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರು, ಸುಮಾರು ಏಳು ವರ್ಷಗಳ ಕಾಲ ಬ್ಲಾಕ್ ಅಧ್ಯಕ್ಷರಾಗಿ ಪಕ್ಷದ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿರುತ್ತಾರೆ ಎಂದು ಶ್ಲಾಘಿಸಿದರು.
ನೂತನ ಅಧ್ಯಕ್ಷರು ಕೂಡಾ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು, ಎಲ್ಲರನ್ನು ಒಗ್ಗೂಡಿಸಿಕೊಂಡು, ಒಗ್ಗಟ್ಟಿನೊಂದಿಗೆ ಕಾರ್ಯನಿರ್ವಹಿಸುವಂತೆ ಕಿವಿ ಮಾತು ಹೇಳಿದರು, ಅದಕ್ಕಾಗಿ ತನ್ನಿಂದ ಎಲ್ಲಾ ರೀತಿಯ ಸಹಾಯ – ಸಹಕಾರ ಸದಾ ನಿಮಗೆ ದೊರೆಯಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ನಿರ್ಗಮನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕೆ. ಪಿ. ಸಿ. ಸಿ ಸಂಯೋಜಕರಾದ ನವೀನ್ ಚಂದ್ರ ಜೆ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಹರೀಶ್ ಕಿಣಿ, ಕಾಪು ಬ್ಲಾಕ್ ಉತ್ತರ ವಿಭಾಗದ ಅಧ್ಯಕ್ಷರಾದ ಸಂತೋಷ್ ಕುಲಾಲ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಯವರು ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭಾಶಯ ಸಲ್ಲಿಸಿದರು.
ನೂತನ ಅಧ್ಯಕ್ಷರಾದ ವೈ. ಸುಕುಮಾರ್ ರವರು ಮಾತನಾಡಿ, ಪಕ್ಷದ ಎಲ್ಲ ಮುಖಂಡರ ಸಲಹೆ ಮತ್ತು ಸಹಕಾರ ಹಾಗೂ ವಿನಯ್ ಕುಮಾರ್ ಸೊರಕೆಯವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸುವ ಮತ್ತು ಮುನ್ನಡೆಸುವ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ ಎಂದು ಸಂಕಲ್ಪ ಮಾಡಿದರು. ಸಭೆಯಲ್ಲಿ, ಪ್ರಮುಖರಾದ ನಡಿಕೆರೆ ರತ್ನಾಕರ ಶೆಟ್ಟಿ, ಗಂಗಾಧರ್ ಸುವರ್ಣ ಎರ್ಮಾಳ್, ಗೋಪಾಲ ಪೂಜಾರಿ ಪಲಿಮಾರ್, ದೀಪಕ್ ಎರ್ಮಾಳ್, ಮೊಹಮ್ಮದ್ ನಿಯಾಜ್, ಗೌರೀಶ್ ಕಟಪಾಡಿ, ಸುನಿಲ್ ಬಂಗೇರ, ವೈ. ಸುಧೀರ್, ಆಶಾ ಅಂಚನ್, ಸುಚರಿತ ಲಕ್ಷ್ಮಣ್, ಜ್ಯೋತಿ ಮೆನನ್, ಪ್ರಭಾ ಶೆಟ್ಟಿ, ಫರ್ಜಾನ ಸಂಜಯ್, ಶೋಭಾ ಬಂಗೇರ, ರಾಧಿಕಾ ಸುವರ್ಣ, ದೇವರಾಜ್ ಕೋಟ್ಯಾನ್, ಸತೀಶ್ ಚಂದ್ರ ಮೂಳೂರು, ಬಾಬಣ್ಣ ನಾಯಕ್, ಮಾಧವ ಪಾಲನ್, ಕೆ. ಎಚ್. ಉಸ್ಮಾನ್, ಸುಧೀರ್ ಕರ್ಕೇರ, ಗಣೇಶ್ ಕೋಟ್ಯಾನ್, ಅಶೋಕ್ ಸಾಲ್ಯಾನ್, ದಿವಾಕರ್ ಶೆಟ್ಟಿ ಕಳತ್ತೂರು, ಅಖಿಲೇಶ್ ಕೋಟ್ಯಾನ್ ಹಾಗೂ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಪಂಚಾಯತ್ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಮೊಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ನವೀನ್ ಎನ್. ಶೆಟ್ಟಿ ವಂದಿಸಿದರು.












