ಉಡುಪಿ: ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ 19ನೇ ಪ್ರತಿಷ್ಠಾಾ ವರ್ಧಂತಿ ಪ್ರಯುಕ್ತ ಆರಾಧನಾ ರಂಗಪೂಜಾ ಮಹೋತ್ಸವ ಹಾಗೂ ಬಲಿ ಉತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇಮೂ ವಿಖ್ಯಾತ್ ಭಟ್ ತಂತ್ರತ್ವದಲ್ಲಿ, ಗಣೇಶ ಸರಳಾಯರ ನೇತೃತ್ವದಲ್ಲಿ ನೆರವೇರಿತು.
ಸಂಜೆ ನಡೆದ ರಂಗಪೂಜೆಯಲ್ಲಿ ದೇವರ ಧ್ಯಾನವನ್ನು ಕ್ಷೇತ್ರದಸ್ವಸ್ತಿಕ್ ಆಚಾರ್ಯ ಉಲಿದರು. ರಾತ್ರಿ ನೆರವೇರಿದ ಬಲಿ ಉತ್ಸವದಲ್ಲಿ ದೇವಿ ನರ್ತನವನ್ನು ನೀರೆ ಗಣೇಶ್ ಭಟ್ ನೆರವೇರಿಸಿದರು.ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸುತ್ತನ್ನು ಸ್ವಾತಿ ಪ್ರತೀಕ್, ಯಕ್ಷಗಾನ ಸುತ್ತನ್ನು ಪ್ರಣಮ್ಯಾ ಶ್ರೀನಿಧಿ ರಾವ್, ಚೆಂಡೆ ಸುತ್ತನ್ನು ಬೆಳ್ಕಳೆ ಚೆಂಡೆ ಬಳಗ, ಪಲ್ಲಕಿ ಸುತ್ತನ್ನು ಬೆಳ್ಮಣ್ಣಿನ ವನದುರ್ಗಾ ಪಲ್ಲಕಿ ಬಳಗ, ಶೃಂಗಾರ ವಾದ್ಯದಲ್ಲಿ ಪ್ರದೀಪ್ ಮತ್ತು ಬಳಗ, ನಾದಸ್ವರದಲ್ಲಿ ರಂಜಿತ್ ಮತ್ತು ಬಳಗ, ಸರ್ವ ವಾದ್ಯದಲ್ಲಿ ಮುರಳೀಧರ ಮುದ್ರಾಾಡಿ ಮತ್ತು ತಂಡದವರಿಂದ ನಾದಸ್ವರ ಸುತ್ತು, ಗುಂಡಿಬೈಲಿನ ಅನುಪಮಾ ಜೋಗಿ ಮತ್ತು ತಂಡದವರಿಂದ ಭಜನೆ ಸುತ್ತು ನಡೆಯಿತು.
ವಸಂತ ಪೂಜೆಯಲ್ಲಿ ನೆರವೇರುವ ಅಷ್ಟಾವಧಾನ ಸೇವೆಯಲ್ಲಿ ವೇಮೂ ರಾಘವೇಂದ್ರ ಭಟ್, ವೇಮೂ ವಿಖ್ಯಾತ್ ಭಟ್, ವೇಮೂ ವಾಮನ ಭಟ್, ವೇಮೂ ಡಾ ಶ್ರೀವತ್ಸ ಅಡಿಗ, ನಾಗಶಯನ, ಅವೀಕ್ಷಿತ ಸರಳಾಯ, ಅಕ್ಷೋಭ್ಯ ಸರಳಾಯ, ಚಂದ್ರಕಲಾ ಶರ್ಮ, ಉಪ್ಪೂರು ಭಾಗ್ಯಲಕ್ಷ್ಮೀ, ಶರಣ್ಯಾ ಭಾಗವಹಿಸಿದ್ದರು.
ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಅನಿಶ್ ಭಟ್ ಹಾಗೂ ಶ್ರೀಯುತ ಆನಂದ್ ಬಾಯರಿ ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಹೂವಿನ ಮಂಟಪದಲ್ಲಿ ವಿರಾಜಮಾನಾಗಿರುವಂತೆ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಿದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.












