ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಫ್ಲೋರೆನ್ಸ್ ನೈಟಿಂಗೇಲ್ ರವರ ಜನ್ಮದಿನದ ಅಂಗವಾಗಿ ವಿಶ್ವ ದಾದಿಯರ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ದಾದಿಯರ ದಿನದ ಪ್ರಯುಕ್ತ ಬಿ ಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೇಸಿಕ್ ಲೈಫ್ ಸಪ್ಪೋರ್ಟ್ ಮತ್ತು ಪ್ರಥಮ ಚಿಕಿತ್ಸಾ ತರಬೇತಿಯನ್ನು ಆಯೋಜಿಸಲಾಗಿತ್ತು . ಮುಖ್ಯ ಅತಿಥಿ ಮೆಡಿಷುರ್ ಹೆಲ್ತ್ ಕೇರ್ ಅಕಾಡೆಮಿಯ ಡೈರೆಕ್ಟರ್ ಹಾಗೂ ಪ್ರಮಾಣಿತ ತರಬೇತುದಾರರಾದ ಡಾ. ಆಸಿಫ್ ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿ ದಾದಿಯರ ದಿನಾಚರಣೆಯಂದು ದಾದಿಯರಿಗೆ ಪ್ರಾಮಾಣಿಕತೆ ಮತ್ತು ವಿನಮ್ರತೆಯು ಮುಖ್ಯ ಎಂದು ಮಾತನಾಡಿದರು.

ಪ್ರಾಂಶುಪಾಲರಾದ ಪ್ರೊ.ಜೆನಿಫರ್ ಫ್ರೀಡಾ ಮನೆಜಸ್ ಸ್ವಾಗತಿಸಿದರು. ಕಾರ್ಯಕ್ರಮ ಸಲಹೆಗಾರರಾದ ಪ್ರೊ. ಚಂದ್ರಶೇಖರ್ ರವರು ದಾದಿಯರ ದಿನದ ಮಹತ್ವವನ್ನು ಸಾರಿದರು. ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಆಯೇಷಾ ರಫೀದ ಕಾರ್ಯಕ್ರಮ ನಿರೂಪಿಸಿ ಉಪಪ್ರಾಂಶುಪಾಲರಾದ ರೂಪಶ್ರೀ ಕೆಎಸ್ ರವರು ವಂಧಿಸಿದರು.












