ಉಡುಪಿ: ರಸ್ತೆಯಲ್ಲಿ ನಿಂತಿದ್ದ ಇನ್ಸುಲೇಟರ್ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಉಡುಪಿ ನಿಟ್ಟೂರು ಶಾಲೆಯ ಮುಂಭಾಗದಲ್ಲಿ ಇಂದು ನಡೆದಿದೆ.
ಉಡುಪಿಯಿಂದ ಸಂತೆಕಟ್ಟೆ ಹೋಗುವ ಮಾರ್ಗದಲ್ಲಿ ತಾಂಗದಗಡಿ ಸಮೀಪ ಉತ್ತರ ಪ್ರದೇಶ ನೋಂದಣಿಯ ಕಾರೊಂದು ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಉಂಟಾಗಿಲ್ಲ. ಕಾರು ರಸ್ತೆಗೆ ಅಡ್ಡವಾಗಿದ್ದ ಪರಿಣಾಮ ಟ್ರಾಫಿಕ್ ಉಂಟಾಯಿತು.












