ಕೊಲ್ಲೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಹಾಗೂ ಚಿತ್ರನಟ ಶ್ರೀಶಾಂತ್ ಅವರು ತಮ್ಮ ಕಟುಂಬಿಕರ ಜತೆ ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕೊಲ್ಲೂರು ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ, ಚಂಡಿಕಾ ಹೋಮ ನೆರವೇರಿಸಿದರು. ಅಧೀಕ್ಷಕ ರಾಮಕೃಷ್ಣ ಅಡಿಗ, ಸಮಿತಿ ಸದಸ್ಯ ರಮೇಶ ಗಾಣಿಗ ಕೊಲ್ಲೂರು, ಉದ್ಯಮಿ ವೆಂಕಟೇಶ ಕಿಣಿ, ದೇಗುಲದ ಪಿಆರ್ಒ ಜಯಕುಮಾರ್ ಅವರು ಶ್ರೀಶಾಂತ್ ದಂಪತಿಯನ್ನು ಸ್ವಾಗತಿಸಿ, ಗೌರವಿಸಿದರು.
ದೇವಾಲಯಕ್ಕೆ 4 ದಿನಗಳಿಂದ ಕ್ಷೇತ್ರಕ್ಕೆ ಅಪಾರ ಭಕ್ತರು ಆಗಮಿಸುತ್ತಿದ್ದಾರೆ. ಶನಿವಾರ, ರವಿವಾರ ರಜಾ ದಿನ ವಾಗಿರುವುದರಿಂದ ಕರ್ನಾಟಕ, ಕೇರಳ, ತಮಿಳುನಾಡಿನ ಭಾಗಗಳಿಂದ ಅಪಾರ ಭಕ್ತರು ಆಗಮಿಸಿದ್ದಾರೆ.












