ಉಡುಪಿ: ಭಾರತ ಪಾಕ್ ಉದ್ವಿಗ್ನತೆ ಹಿನ್ನೆಲೆಯಲ್ಲಿ ಶುಕ್ರವಾರ (ಮೇ.09)ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.ದೇಶದಲ್ಲಿ ಶಾಂತಿ ನೆಲೆಸುವಂತೆ ಮುಸಲ್ಮಾನ ಬಾಂಧವರು ದುಆ ನಿರ್ವಹಿಸಿದರು.ಶತ್ರು ರಾಷ್ಟ್ರದ ಯುದ್ಧದಲ್ಲಿ ದೇಶಕ್ಕೆ ಹಿತವಾಗಬೇಕು, ಆದಷ್ಟು ಬೇಗ ದೇಶ ಮತ್ತೆ ಶಾಂತಿಯತ್ತ ಮರಳಬೇಕು ಎಂದು ಶುಕ್ರವಾರದ ಜುಮಾ ನಮಾಜಿನ ಬಳಿಕ ಧರ್ಮಗುರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಬಳಿಕ ಮಾತನಾಡಿದ ಮುಸ್ಲಿಂ ಮುಖಂಡ ಇಕ್ಬಾಲ್ ಮನ್ನಾ ಅವರು, ಪೆಹಲ್ಗಾಂ ದಾಳಿಯ ನಂತರ ನಾವು ಪಾಕಿಗಳಿಗೆ ತಕ್ಕ ಪಾಠ ಕಲಿಸಿದ್ದೇವೆ.ಪಾಕಿಸ್ಥಾನಕ್ಕೆ ಹೊಡೆಯಲು ಭಾರತಕ್ಕೆ ಅರ್ಧ ಗಂಟೆ ಸಾಕು.ಪದೇಪದೇ ಜಗಳಕ್ಕೆ ಬರುವ ಪಾಕ್ ಗೆ ತಕ್ಕ ಶಾಸ್ತಿಯಾಗಲಿದೆ.
ಈ ಸಂದರ್ಭದಲ್ಲಿ ನಾವೆಲ್ಲ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ.ವಕ್ಫ್ ಇಲಾಖೆಯಿಂದಲೂ ನಮಗೆ ನಿರ್ದೇಶನ ಬಂದಿದೆ.ಅದಕ್ಕೂ ಮುನ್ನವೇ ನಾವು ಪ್ರಾರ್ಥನೆ ಮಾಡಲು ನಿರ್ಧರಿಸಿದ್ದೆವು.ದೇಶಕ್ಕಾಗಿ ದೇಶದ ಜನರ ಒಳಿತಿಗಾಗಿ ಮಸೀದಿಯಲ್ಲಿ ಪ್ರಾರ್ಥನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.












