Ind-Pak War: ಭಾರತದ ದಾಳಿಗೆ ರಾತ್ರೋ ರಾತ್ರಿ ಪಾಕಿಸ್ತಾನದ ಮೂರು ಏರ್ ಬೇಸ್ ಉಡಿಸ್- ಮೇ 14ರವರೆಗೆ ಉತ್ತರ ಭಾರತದಲ್ಲಿ ವಿಮಾನಯಾನ ಸಂಪೂರ್ಣ ಸ್ಥಗಿತ

ನವದೆಹಲಿ: ಕಳೆದ 48 ಗಂಟೆಯಲ್ಲಿ ಪಾಕ್ ನಿಂದ ಭಾರತದ 36 ನಗರಗಳು ಟಾರ್ಗೆಟ್ ನಲ್ಲಿದ್ದು 20 ನಗರಗಳ ಮೇಲೆ ಡ್ರೋನ್, ಶೆಲ್ ದಾಳಿ ನಡೆಯುತ್ತಲೇ ಇದೆ. ದಾಳಿಯನ್ನು ಭಾರತೀಯ ಸೇನೆ ತಡೆಯುತ್ತಲೇ ಇದೆ (Ind-Pak War).ಭಾರತೀಯ ಕಾಲಮಾನದಂತೆ ಮದ್ಯರಾತ್ರಿ 2 ಗಂಟೆಗೆ ಪಾಕಿಸ್ತಾನದ ಲಾಹೋರ್ ನ ಸೇನೆಯ ಡಿಎಚ್ಎ ಬಳಿ ಭಾರಿ ಪ್ರಮಾಣದ ಸ್ಪೋಟದ ಸದ್ದಾಗಿದೆ.

ಸ್ವಲ್ಪ ಸಮಯದ ನಂತರ ಪಾಕಿಸ್ತಾನದ ವಾಯುಸೇನೆಯ ಏರ್ ಬೇಸ್ ಗಳಾದ ರಾವಲ್ಪಿಂಡಿಯ ನೂರ್ ಖಾನ್ ಏರ್ ಬೇಸ್ ಚಕ್ಲಾಲ, ಪಂಜಾಬ್ ಸೊರ್ಕೋಟ್ ನ ಪಿಎಎಫ್ ರಫೀಕ್ ಏರ್ ಬೇಸ್, ಪಿಎಎಫ್ ಮುರೀದ್ ಏರ್ ಬೇಸ್ ಚಕ್ವಾಲ ಪಂಜಾಬ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

ಈ ದಾಳಿಯನ್ನು ರಾತ್ರೋರಾತ್ರಿ ಪಾಕಿಸ್ತಾನದ ಸೇನೆ ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದೆ.

ಇದರಿಂದಾಗಿ ಪಾಕಿಸ್ತಾನದಾದ್ಯಂತ ವಿಮಾನ ಯಾನವನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ.ಇದೀಗ ಬೆಳಗಿನ ಜಾವ ಪಾಕಿಸ್ತಾನದ ಮಿಸೈಲ್ ಜಮ್ಮುವಿನ ಜನವಸತಿ ಪ್ರದೇಶ ಉದಾಂಪುರದಲ್ಲಿ ಸ್ಪೋಟಗೊಂಡಿದೆ.

ಉತ್ತರ ಭಾರತದ 32 ವಿಮಾನ ನಿಲ್ದಾಣ ಸ್ಥಗಿತ: ಪಾಕಿಸ್ತಾನದ ಏರ್ ಬೇಸ್ ದಾಳಿಯ ನಂತರ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ 32 ವಿಮಾನ ನಿಲ್ದಾಣಗಳನ್ನು ಮೇ.14 ರವರೆಗೆ ಸಂಪೂರ್ಣ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.