ಉಡುಪಿ: ಸರ್ಕಾರ ಮೊದಲು ತನ್ನ ಕರ್ತವ್ಯ ಮಾಡಲಿ, ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದನ್ನು ಬಿಡಲಿ.ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಮಾಜಿ ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ,ಮಂಗಳೂರಿನಲ್ಲಿ ಹಿಂದೂ ಸಮಾಜಕ್ಕಾಗಿ ಹೋರಾಟ ಮಾಡುವವರ ಹತ್ಯೆಗಳು ನಡೆಯುತ್ತಿವೆ.ಇದಕ್ಕಾಗಿ ಟಾರ್ಗೆಟ್ ಮಾಡಿ ತಂಡ ರಚನೆ ಮಾಡಲಾಗಿದೆ.ಅಂತಹವರನ್ನು ಮಟ್ಟ ಹಾಕುವ ಕೆಲಸವನ್ನು ಸರ್ಕಾರ ಮಾಡಬೇಕು. ಇವತ್ತು ಕಾಶ್ಮೀರದ ಪರಿಸ್ಥಿತಿ ಮಂಗಳೂರಿಗೂ ಬಂದಿದೆ ಎಂದು ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದರು.












