ಆತ್ರಾಡಿಯಲ್ಲಿ ಯಶ್ ಡ್ರೆಸ್ ಸೆಂಟರ್ & ಫೂಟ್ ವೇರ್ ಉದ್ಘಾಟನೆ.

ಉಡುಪಿ: ಆತ್ರಾಡಿ ಶಾಂಭವಿ ಕಾಂಪ್ಲೆಕ್ಸ್ ನಲ್ಲಿ ಉದಯ ನಾಯ್ಕ್ ಮಾಲಕತ್ವದ ಯಶ್ ಡ್ರೆಸ್ ಸೆಂಟರ್ & ಫೂಟ್ ವೇರ್ ಅನ್ನು ಶಾಸಕ ಯಶಪಾಲ್ ಎಸ್. ಸುವರ್ಣ ಅವರು ಇಂದು(ಮೇ.4) ಉದ್ಘಾಟನೆ ಮಾಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪರೀಕ ಇದರ ಆಡಳಿತ ಮೊಕ್ತೇಸರರಾದ ಉದಯರಾಜ್ ಹೆಗ್ಡೆ, ಖ್ಯಾತ ವೈದ್ಯ ಡಾ.ಸತೀಶ್ ಶೆಟ್ಟಿ, ಸ್ಥಳೀಯ ಮುಖಂಡ ಸತ್ಯಾನಂದ ನಾಯಕ್ ಆತ್ರಾಡಿ, ಉದ್ಯಮಿ ಪ್ರವೀಣ್ ಪೂಜಾರಿ ಹಿರೇಬೆಟ್ಟು, ಪಂಚಾಯತ್ ಮಾಜಿ ಅಧ್ಯಕ್ಷರು ರತ್ನಾಕರ್ ಶೆಟ್ಟಿ, ಪಂಚಾಯತ್ ಸದಸ್ಯ ಇಸ್ಮಾಯಿಲ್ ಆತ್ರಾಡಿ, ಮಣಿಪಾಲದ ಯುವ ಉದ್ಯಮಿ ಸುಬ್ರಮಣ್ಯ ಕಾಂತರಗುಂಡಿ, ಮರಾಠಿ ಸಮಾಜದ ಹಿರಿಯರಾದ ಗೋಪಾಲ ನಾಯ್ಕ್ ಪಡು ಆತ್ರಾಡಿ, ಮಣಿಪಾಲ ರಿಕ್ಷಾ ಮಾಲಕ ಸಂಘದ ಮಾಜಿ ಅಧ್ಯಕ್ಷರು ವಿಜಯ ಪುತ್ರನ್ ಹಿರೇಬೆಟ್ಟು ಮುಂತಾದವರು ಉಪಸ್ಥಿತರಿದ್ದರು. ಶ್ರೀ ರವಿರಾಜ್ ಆಚಾರ್ಯ ಮದಗ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.