ಮೇ.4, ಮತ್ತು 5 ರಂದು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ 30ನೇ ವರ್ಷದ ಸಂಭ್ರಮಾಚರಣೆ ಮತ್ತು ರಜತ ಮಹೋತ್ಸವ ಕಾರ್ಯಕ್ರಮ

ಉಡುಪಿ: ಗಾಂಧಿ ಆಸ್ಪತ್ರೆ ಉಡುಪಿ ಇದರ 30ನೇ ವರ್ಷದ ಸಂಭ್ರಮಾಚರಣೆ ಮತ್ತು ಪಂಚಮಿ ಟ್ರಸ್ಟ್ (ರಿ.) ಇದರ ರಜತ ಮಹೋತ್ಸವ ಕಾರ್ಯಕ್ರಮವು ಮೇ.4 ಮತ್ತು 5 ರ ಭಾನುವಾರ ಮತ್ತು ಸೋಮವಾರದಂದು ಸಂಜೆ 5:00 ಯಿಂದ ಆರಂಭವಾಗಲಿದೆ.

ಮೇ 4 2025, ಭಾನುವಾರದಂದು ಪಂಚಮಿ ಟ್ರಸ್ಟ್ (ರಿ.)ಇದರ ರಜತ ಮಹೋತ್ಸವದ ಅಂಗವಾಗಿ ನಾದಲಹರಿ ಕಾರ್ಯಕ್ರಮವನ್ನು ಮನು, ಮಧ್ವ, ಸುಮೇದ, ಅರ್ಪಿತಾ ಇವರು ಪ್ರಸ್ತುತ ಪಡಿಸಲಿದ್ದಾರೆ. ವಯೋಲಿನ್ ಕಚೇರಿಯನ್ನು ಖ್ಯಾತ ಬಾಲ ಪ್ರತಿಭೆ ಕು.ಗಂಗಾ ಶಶಿಧರನ್ ಗುರುವಾಯೂರು ಇವರು ನುಡಿಸಲಿದ್ದಾರೆ.

ಮೇ 5 2025, ಸೋಮವಾರದಂದು ಗಾಂಧಿ ಆಸ್ಪತ್ರೆ ಉಡುಪಿ ಇದರ 30ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ವಿಕಲಚೇತನ ಕಲಾವಿದರು ಅಭಿನಯಿಸಿರುವ ಡಾ. ಸೈಯದ್ ಎಸ್. ಪಾಶಾ ನಿರ್ದೇಶನದ ಮಿರಾಕ್ಲ್ ಆನ್ ವೀಲ್ಸ್ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪಂಚಲಹರಿ ಫೌಂಡೇಶನ್, ಮದಗ ಆತ್ರಾಡಿ, ಉಡುಪಿ.