ಉಡುಪಿ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು.

ಉಡುಪಿ, ಮೇ 2: ಕಾರ್ಕಳ ತಾಲೂಕು ಕುಕ್ಕಂದೂರು ಗಣಿತ ನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸ್ವಸ್ತಿ ಕಾಮತ್ ಅವರು ಇಂದು ಪ್ರಕರಣಗೊಂಡ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯದ 22 ಮಂದಿಯೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ಸ್ವಸ್ತಿ ಕಾಮತ್ ಅವರು ಎಲ್ಲಾ ಆರು ವಿಷಯಗಳಲ್ಲೂ ಗರಿಷ್ಠ ಅಂಕ ಗಳಿಸಿದರು. ಉಳಿದಂತೆ ಜಿಲ್ಲೆಯ ಇಬ್ಬರು 624, ಐವರು 623 ಹಾಗೂ ಏಳು ಮಂದಿ 622 ಅಂಕಗಳನ್ನು ಗಳಿಸಿದ್ದಾರೆ. ಜಿಲ್ಲೆಯಲ್ಲಿ ಗರಿಷ್ಠ 15 ಸ್ಥಾನ ಪಡೆದವರ ವಿವರ ಹೀಗಿದೆ.

1.ಸ್ವಸ್ತಿ ಕಾಮತ್, ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಕುಕ್ಕಂದೂರು ಕಾರ್ಕಳ (625ಅಂಕ), 2.ಪ್ರಕೃತಿ ಪಿ.ಗುಡಿಯಾರ್, ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪಿಯು ಶಾಲೆ ಕಾರ್ಕಳ (624), 3.ಸುಶ್ಮಿತಾ ಎಸ್.ಗಾಣಿಗ, ಎಸ್‌ವಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗಂಗೊಳ್ಳಿ ಕುಂದಾಪುರ (624). 4.ಸಾಯಿಸ್ಪರ್ಶ ಕೆ., ವಿಕೆಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಕುಂದಾಪುರ (623), 5.ವರ್ಷಿಣಿ ಎಸ್.ರೈ, ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ (623), 6.ನಿಧಿ ಪೈ ಎಂ., ವಿವೇಕ ಆಂಗ್ಲ ಮಾಧ್ಯಮ ಶಾಲೆ ಕೋಟ (623), 7.ಕೆ.ಶ್ರೀನಿತ್ ಎಸ್.ಶೇರಿಗಾರ್, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಡುಪಿ (623), 8.ಪ್ರಾವ್ಯ ಪಿ.ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿ ಕುಂದಾಪುರ (623). 9.ಸೃಷ್ಟಿ ಆಚಾರ್, ಸರಕಾರಿ ಬಾಲಕಿಯರ ಜೂನಿಯರ್ ಕಾಲೇಜು ಉಡುಪಿ (622), 10.ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ (622), 11.ಪ್ರಿಯಾ, ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ (622), 12.ಹರಿಪ್ರಸಾದ್ ಎಂ.ಎಸ್., ಶ್ರೀವೆಂಕಟರ ಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ (622), 13.ಸಾಯಿ ಕೀರ್ತನ, ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ (622), 14.ಮಾನಸಿ ನಾಯಕ್, ಶ್ರೀಮದ್ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ (622), 15. ಆಯುಷ್ ಯು.ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿ ಕುಂದಾಪುರ (622).