ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಿಂದ ಕೈಗಾರಿಕಾ ನಾವೀನ್ಯತೆಗೆ ಮತ್ತೊಂದು ಹೆಜ್ಜೆ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಶ್ರೀ ವಿನಯಚಂದ್ರ ಅವರು ಈಸಿ
ಐಸಿಡಿ – 11 ಎಂಬ ಮೊಬೈಲ್ ಅಪ್ಲಿಕೇಶನ್ ,ಅಭಿವೃದ್ದಿಗೊಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಐಸಿಡಿ – 11 ವೈದ್ಯಕೀಯ ಕೋಡ್‌ಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಯೋಜನೆ ಇದಾಗಿದೆ. ಈ ಅಪ್ಲಿಕೇಶನ್‌ನ್ನು ಅಲಾರ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಡಾ.ಸಚಿನ್ ಎಸ್ ಭಟ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಪಡಿಸಲಾಗಿದೆ.

ಈಸಿ ಐಸಿಡಿ – 11 ಅಪ್ಲಿಕೇಶನ್‌ನಲ್ಲಿ ಸರಳ ನ್ಯಾವಿಗೇಶನ್, ಕ್ಲಿಪ್‌ಬೋರ್ಡ್ ಫಂಕ್ಷನಾಲಿಟಿ ಹಾಗೂ ಪೋಸ್ಟ್ ಕೋ ಆರ್ಡಿನೇಶನ್ ಸೌಲಭ್ಯಗಳಿವೆ. ಇದು ವೈದ್ಯಕೀಯ ವೃತ್ತಿಪರರು,
ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಅಮೂಲ್ಯ
ಮಾರ್ಗದರ್ಶಿಯಾಗುತ್ತದೆ. ಶ್ರೀ ವಿನಯಚಂದ್ರ ಅವರು ಈ ಅಪ್ಲಿಕೇಶನ್ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡಿದ್ದು, ಉಪಯೋಗಿಸಲು ಸುಲಭವಾದ ಮತ್ತು ಉತ್ತಮ ಕೆಲಸ ಮಾಡುವ ಅಪ್ಲಿಕೇಶನ್ ವಿನ್ಯಾಸ ಮಾಡಿರುತ್ತಾರೆ.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಮುಖ್ಯ ಆಡಳಿತಾಧಿಕಾರಿಗಳಾದ ಪ್ರೊ.ಡಾ. ರಾಧಕೃಷ್ಣ ಎಸ್
ಐತಾಳ್ ಮತ್ತು ಕಾಲೇಜಿನ ಡೀನ್ ಡಾ. ನಾಗರಾಜ್ ಭಟ್ ಇವರು ಅಧಿಕೃತವಾಗಿ ಈ ಯೋಜನೆಗೆ ಚಾಲನೆ ನೀಡಿದರು.

ಇವರ ಈ ಸಾಧನೆಯು ಶ್ರೀ ಮಧ್ವವಾದಿರಾಜ
ತಾಂತ್ರಿಕ ವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದ್ದು ಪ್ರಾಯೋಗಿಕ ಅಧ್ಯಯನ ಮತ್ತು ನಾವೀನ್ಯತೆಗೆ ನೀಡುತ್ತಿರುವ ಮಹತ್ವವನ್ನು ಮತ್ತಷ್ಟು ಬಲಪಡಿಸುತ್ತದೆ.