ರುದ್ರಪ್ರಯಾಗ, ಮೇ 02: ಇಂದಿನಿಂದ ಚಾರ್ಧಾಮ್ ಯಾತ್ರೆ ಆರಂಭಗೊಳ್ಳಲಿದೆ. ಮುಂದಿನ 6 ತಿಂಗಳ ಕಾಲ ಯಾತ್ರಿಕರು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ.
ಚಾರ್ಧಾಮ್ ಯಾತ್ರೆಯು ಜಗತ್ತಿನ ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾಗಿದ್ದು, ಕೇದಾರನಾಥ ಧಾಮವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಮತ್ತು ಇದು ಶಿವನಿಗೆ ಅರ್ಪಿತವಾಗಿದೆ. ಬದರಿನಾಥ ಧಾಮವು ವಿಷ್ಣುವಿಗೆ ಅರ್ಪಿತವಾಗಿದೆ. ಗಂಗೋತ್ರಿ ಧಾಮವು ಗಂಗಾ ಮಾತೆಗೆ ಸಮರ್ಪಿತವಾಗಿದೆ ಮತ್ತು ಯಮುನೋತ್ರಿಯು ಯಮುನೆಗೆ ಸಮರ್ಪಿತವಾಗಿದೆ. ಈ ಬಾರಿ ಚಾರ್ಧಾಮ್ ಯಾತ್ರೆಗೆ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪ್ರಯಾಣ ಮಾರ್ಗದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುತ್ತಿದೆ.












