ಬೆಂಗಳೂರು: ಕರ್ನಾಟಕದಲ್ಲಿ ಮದ್ಯದ ಬೆಲೆ ದುಬಾರಿ ಆಗಿರುವಾಗಲೇ ಮದ್ಯದ ಬೆಲೆಯನ್ನು ಪ್ರತಿ ತ್ರೈಮಾಸಿಕಕ್ಕೆ (ಪ್ರತಿ ಮೂರು ತಿಂಗಳು)10 ರೂಪಾಯಿ ಯಿಂದ 15 ರೂಪಾಯಿ ಹೆಚ್ಚಳ ಹಾಗೂ ಬಿಯರ್ ಬೆಲೆಯನ್ನು ಈಗ ಇರುವ ಬೆಲೆಗಿಂತ ಶೇ.10% ರಷ್ಟು ಹೆಚ್ಚಳ ಮಾಡಲು ಭರ್ಜರಿ ಸಿದ್ಧತೆ ಶುರುವಾಗಿದೆ.
ಡೀಸೆಲ್ ತೆರಿಗೆ, ವಿದ್ಯುತ್ ಸುಂಕ ಮತ್ತು ಹಾಲಿನ ಬೆಲೆಗಳನ್ನು ಹೆಚ್ಚಿಸಿದ ಕೆಲವೇ ದಿನಗಳಲ್ಲಿ, ಸರ್ಕಾರ ಈಗ ಮದ್ಯದ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ.
ಅಬಕಾರಿ ಇಲಾಖೆಗೆ 40,000 ಕೋಟಿ ರೂ. ಗುರಿ:
ಮುಖ್ಯಮಂತ್ರಿಗಳು ಅಬಕಾರಿ ಇಲಾಖೆಗೆ 40,000 ಕೋಟಿ ರೂ.ಗಳ ಅಬಕಾರಿ ಸುಂಕ ಸಂಗ್ರಹ ಗುರಿ ನಿಗದಿಪಡಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಮದ್ಯದ ಬೆಲೆಗಳನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಮದ್ಯದ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸುವುದು ಸಹ ಪ್ರಸ್ತಾವನೆಯಲ್ಲಿದೆ.
ವಿಸ್ಕಿ, ಜಿನ್ ಹಾಗೂ ರಮ್ ಬೆಲೆ ಏರಿಕೆ:
ಅಬಕಾರಿ ಇಲಾಖೆ ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ನಾಗರಿಕರಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ. ಸರ್ಕಾರದ ಹೊಸ ಅಧಿಸೂಚನೆಯ ಅನ್ವಯ, ವಿಸ್ಕಿ, ಜಿನ್ ಹಾಗೂ ರಮ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಲಿದೆ. ಈ ಮದ್ಯದ ಬೆಲೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ 10 ರೂಪಾಯಿ ಯಿಂದ 15 ರೂಪಾಯಿ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಇದರಲ್ಲಿ ಬಿಯರ್, ಟಾಡಿ ಹಾಗೂ ವೈನ್ ಮದ್ಯಗಳನ್ನು ಸೇರಿಸಿಲ್ಲ.
ಆದಾಗ್ಯೂ, ದುಬಾರಿ ದರದ ಮದ್ಯಗಳ ಸಹವಾಸಕ್ಕೆ ಹೋಗಿಲ್ಲ್ಲ. “ಎಲ್ಲಾ ವಿಭಾಗಗಳಲ್ಲಿ ಬಿಯರ್ ದರವನ್ನು ಶೇ. 10 ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಮದ್ಯದ ಮಾರಾಟ ಹೆಚ್ಚಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ನೆರೆಹೊರೆಯ ರಾಜ್ಯಗಳು ಕರ್ನಾಟಕದ ಮದ್ಯವನ್ನು ಮಾರಾಟ ಮಾಡಲು ಅವಕಾಶ ನೀಡುತ್ತಿಲ್ಲ, ಆದರೆ ತಮ್ಮ ರಾಜ್ಯಗಳಿಂದ ಕರ್ನಾಟಕಕ್ಕೆ ಬಾಟಲಿಗಳನ್ನು ಸಾಗಿಸಲು ಅವಕಾಶ ನೀಡಲು ಉತ್ಸುಕವಾಗಿವೆ. ಹೀಗಾಗಿ ಇತರ ರಾಜ್ಯಗಳಿಗೆ ಸಮನಾಗಿ ಬೆಲೆ ಏರಿಕೆಯನ್ನು ಪ್ರಸ್ತಾಪಿಸಲಾಗಿದೆ. ಇದು ಸರ್ಕಾರಕ್ಕೆ ಉತ್ತಮ ಆದಾಯದ ಮೂಲವಾಗಿದೆ” ಎಂದು ಅವರು ಹೇಳಿದರು.












