ಹೆಬ್ರಿ: ಬೇಸಿಗೆ ಶಿಬಿರದಲ್ಲಿ ತೊಡಗಿಸಿಕೊಂಡಾಗ ಮಕ್ಕಳ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂತಹ ಬೇಸಿಗೆ ಶಿಬಿರದಲ್ಲಿ ಸೇರಿಸುವ ಮೂಲಕ ಮಕ್ಕಳನ್ನು ಕ್ರಿಯಾತ್ಮಕವಾಗಿ ತೊಡೆಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೆಬ್ರಿ ಜೇಸಿಐ ಪೂರ್ವಾಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಜೆಸಿಐ ನೇತೃತ್ವದಲ್ಲಿ ಚಾಣಕ್ಯ ಎಜುಕೇಶನ್ ಕಲ್ಚರ್ ಅಕಾಡೆಮಿ ಹೆಬ್ರಿ ಇವರ ಸಹಯೋಗದಲ್ಲಿ ನಡೆದ ಮೂರು ದಿನಗಳ ಬೇಸಗೆ ಶಿಬಿರಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹೆಬ್ರಿ ಜೆಸಿಐ ಅಧ್ಯಕ್ಷೆ ಸೋನಿ ಪಿ ಶೆಟ್ಟಿ ವಹಿಸಿ ಮಾತನಾಡಿ ಶಿಬಿರದ ಯಶಸ್ವಿಗೆ ಸಹಕರಿಸಿದ ಚಾಣಕ್ಯ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಜೆಜೆಸಿಯ ಪರೀಕ್ಷಿತ್, ಕಾರ್ಯದರ್ಶಿ ಉದಯ ಸೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಮೂರು ದಿನಗಳ ಶಿಬಿರದಲ್ಲಿ ಮಣ್ಣಿನ ಮಡಿಕೆ ತಯಾರಿ, ಕೃತಕ ಆಭರಣ ತಯಾರಿ, ಉಚಿತ ಆರೋಗ್ಯ ತಪಾಸಣೆ, ಸತ್ಯ ಮತ್ತು ಪಕ್ಷಿ ಸಂಕಲದ ಬಗ್ಗೆ ಮಾಹಿತಿ, ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್, ನಿಸರ್ಗಧಾಮ ಭೇಟಿ ಮೊದಲಾದ ಕಾರ್ಯಕ್ರಮಗಳು ನಡೆಯಿತು. ಸೀತಾದಿ ನೇಚರ್ ಕ್ಯಾಂಪ್ ವತಿಯಿಂದ ವನ್ಯಜೀವಿ ಬಗ್ಗೆ ಸಾಕ್ಷ ಚಿತ್ರ ಪ್ರದರ್ಶನ ನಡೆಯಿತು. ಸೀತಾ ನದಿ ನೇಚರ್ ಕ್ಯಾಂಪ್ ನ ಅಧಿಕಾರಿ ದೇವರಾಜ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಜೇಸಿಐ ನ ನಿಕಟ ಪೂರ್ವ ಅಧ್ಯಕ್ಷೆ ರಕ್ಷಿತಾ ಪಿ. ಭಟ್, ಪೂರ್ವ ಅಧ್ಯಕ್ಷ ರೂಪೇಶ್ ನಾಯ್ಕ್, ವಿಜೇತ ಶೆಟ್ಟಿ,ಶೀಲಾ ಪ್ರವೀಣ್,ರೀನಾ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.












