ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಆಚರಣೆ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ 2025 ಆಚರಿಸಲಾಯಿತು.

ವಿ.ಟಿ.ಯು ಎಕ್ಸ್ ಟೆಂಷನ್ ಸೆಂಟರ್ ಮಂಗಳೂರು ಇಲ್ಲಿನ ವಿಶೇಷ ಅಧಿಕಾರಿಗಳಾದ ಡಾ. ಎನ್. ದಾಮೋದರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಉದ್ಯೋಗವಕಾಶಗಳನ್ನು ಪಡೆಯುವ ವಿವಿಧ ಹಾದಿಗಳ ಬಗ್ಗೆ ತಿಳಿಸಿದರು. ಎಂ. ಐ.ಟಿ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂರವರು ವರದಿ ವಾಚನಗೈದರು.

ಕಾಲೇಜಿನ ಉಪಾಪ್ರಾಂಶುಪಾಲಾರದ
ಡಾ. ಮೆಲ್ವ್ವಿ ನ್.ಡಿ ಸೋಜ ರವರು ಕಲಿಕೆಯಲ್ಲಿ ಉತ್ತಮ ಸಾಧನೆಗೈದವರ ಪಟ್ಟಿಯನ್ನು ಓದಿದರು. ಐ. ಎಂ. ಜೆ ಇನ್ಸ್ಟಿಟ್ಯೂಷನ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಮಾತನಾಡಿ ಆರ್ಟಿಫಿಷಿಯಲ್ ಇಂಟಲಿಜಸನ್ ಉಪಯೋಗ ಹೆಚ್ಚುತಿರುವುದರಿಂದ ವಿದ್ಯಾರ್ಥಿಗಳು ಆ ಕಡೆಗೂ ಗಮನಹರಿಸಬೇಕು ಎಂದರು.

ಈ ಕಾರ್ಯಕ್ರಮದ ಸಂಚಾಲಕರಾದ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಸ್ವಾಗತಿಸಿದರು. ಎಂ.ಬಿ.ಎ ವಿದ್ಯಾರ್ಥಿನಿ ಸಹರಾ ಕಾರ್ಯಕ್ರಮ ನಿರ್ವಹಿಸಿದರು. ಎಂ.ಬಿ.ಎ ವಿದ್ಯಾರ್ಥಿನಿ ಶಾಂಭವಿ ವಂದಿಸಿದರು.